ಮಾಹಿತಿ ಹಕ್ಕು ಅಧಿನಿಯಮ, 2005

ಮಾಹಿತಿ ಹಕ್ಕು ಅಧಿನಿಯಮ, 2005

ಮಾಹಿತಿ ಹಕ್ಕು ಅಧಿನಿಯಮ, 2005 ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಸಾರ್ವಜನಿಕ ಪ್ರಾಧಿಕಾರಗಳ ನಿಯಂತ್ರಣದಲ್ಲಿರುವ ಮಾಹಿತಿಯನ್ನು ಪಡೆಯಲು ನಾಗರಿಕರಿಗೆ ಸಾಧ್ಯವಾಗಿಸುವ ಮಾಹಿತಿ ಹಕ್ಕಿನ ಕಾರ್ಯಸಾಧ್ಯವಾದ ಆಡಳಿತ ವಿಧಾನವನ್ನು ನಿರೂಪಿಸಲಿಕ್ಕೆ ಅವಕಾಶ ಕಲ್ಪಿಸುತ್ತದೆ.

ಆರ್‌ಟಿಐ ಕಾಯಿದೆಯಡಿ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಶ್ರೀ ಪದ್ಮರಾಜು (ಪಿಐಒ), ಬಿಎಂಆರ್‌ಸಿಎಲ್, ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 080-22969200 / 080-22969400

ಮಾಹಿತಿ ಹಕ್ಕು ಅಧಿನಿಯಮವು ಯಾವಾಗ ಜಾರಿಗೆ ಬಂದಿತು?

ಕೇಂದ್ರ ಮಾಹಿತಿ ಹಕ್ಕು ಅಧಿನಿಯಮವು, 12.10.2005 ರಂದು ಜಾರಿಗೆ ಬಂದಿತು. ಆದರೂ, ಅದಕ್ಕೂ ಮುಂಚೆ 9 ರಾಜ್ಯ ಸರ್ಕಾರಗಳು ರಾಜ್ಯ ಅಧಿನಿಯಮಗಳನ್ನು ಅಂಗೀಕರಿಸಿದ್ದವು, ಈ ರಾಜ್ಯಗಳೆಂದರೆ ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳು ನಾಡು, ಅಸ್ಸಾಂ ಮತ್ತು ಗೋವಾ.

ಈ ಹಕ್ಕನ್ನು ನೀಡುವ ಅಧಿನಿಯಮ ನಮಗೆ ಏಕೆ ಬೇಕು?

ನೀವು ಯಾವುದಾದರು ಸರ್ಕಾರಿ ಇಲಾಖೆಗೆ ಹೋಗಿ, ಅಲ್ಲಿ "ಮಾಹಿತಿ ಹಕ್ಕು ನನ್ನ ಮೂಲಭೂತ ಹಕ್ಕು ಮತ್ತು ನಾನು ಈ ದೇಶದ ಪ್ರಭು. ಆದ್ದರಿಂದ, ನನಗೆ ದಯಮಾಡಿ ತಮ್ಮೆಲ್ಲ ಕಡತಗಳನ್ನು ತೋರಿಸಿ" ಎಂದು ಅಧಿಕಾರಿಯನ್ನು ಕೇಳಿದರೆ, ಆತನು ತೋರಿಸುವುದಿಲ್ಲ. ಬದಲಾಗಿ ಆತನು ತನ್ನ ಕೊಠಡಿಯಿಂದ ನಿಮನ್ನು ಹೊರೆಗೆ ತಳ್ಳಿಸುವ ಎಲ್ಲಾ ಸಾಧ್ಯತೆಗಳಿರುತ್ತವೆ. ಆದ್ದರಿಂದ, ನಮಗೆ ಒಂದು ವ್ಯವಸ್ಥೆ ಅಥವಾ ಪ್ರಕ್ರಿಯೆ ಅಗತ್ಯವಾಗಿದೆ. ಈ ವ್ಯವಸ್ಥೆ ಅಥವಾ ಪ್ರಕ್ರಿಯೆ ಮೂಲಕ ಈ ಮೂಲಭೂತ ಹಕ್ಕನ್ನು ನಾವು ಚಲಾಯಿಸಬಹುದು. 13ನೇ ಅಕ್ಟೋಬರ್ 2005 ರಂದು ಜಾರಿಗೆ ಬಂದಂತಹ ಮಾಹಿತಿ ಹಕ್ಕು ಅಧಿನಿಯಮ 2005 ನಮಗೆ ಆ ಒಂದು ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಆದ್ದರಿಂದ, ಮಾಹಿತಿ ಹಕ್ಕು ಅಧಿನಿಯಮ ನಮಗೆ ಯಾವುದೇ ಹೊಸ ಹಕ್ಕನ್ನು ನೀಡುವುದಿಲ್ಲ. ಇದು ಮಾಹಿತಿ ಕೋರಿ ಹೇಗೆ ಅರ್ಜಿ ಸಲ್ಲಿಸಬೇಕು, ಎಲ್ಲಿ ಅರ್ಜಿ ಸಲ್ಲಿಸಬೇಕು, ಎಷ್ಟು ಶುಲ್ಕ ಪಾವತಿಸಬೇಕು ಎಂಬಿತ್ಯಾದಿ ಪ್ರಕ್ರಿಯೆಯನ್ನಷ್ಟೇ ನಿರೂಪಿಸುತ್ತದೆ. ಈ ಕಾರಣಕ್ಕಾಗಿ ನಮಗೆ ಮಾಹಿತಿ ಹಕ್ಕು ಅಧಿನಿಯಮ ಬೇಕು.

ಮಾಹಿತಿ ಹಕ್ಕು ಆಧಿನಿಯಮ 2005 ರಡಿ ಯಾವೆಲ್ಲಾ ಹಕ್ಕುಗಳು ಅಭ್ಯವಿದೆ?

ಸರ್ಕಾರಕ್ಕೆ ಯಾವುದೇ ಪ್ರಶ್ನೆಗಳನ್ನು ಕೇಳಬಹುದು ಅಥವಾ ಸರ್ಕಾರದಿಂದ ಯಾವುದೇ ಮಾಹಿತಿಯನ್ನು ಕೋರಬಹುದು

  • ಯಾವುದೇ ಸರ್ಕಾರಿ ದಾಖಲೆಗಳ ಪ್ರಕ್ರಿಗಳನ್ನು ಪಡೆಯಬಹುದು.
  • ಯಾವುದೇ ಸರ್ಕಾರಿ ದಾಖಲೆಗಳ ತಪಾಸಣೆ.
  • ಯಾವುದೇ ಸರ್ಕಾರಿ ಕಾಮಗಾರಿಗಳ ತಪಾಸಣೆ.
  • ಯಾವುದೇ ಸರ್ಕಾರಿ ಕಾಮಗಾರಿಯ ಸಾಮಗ್ರಿಗಳ ಮಾದರಿಗಳನ್ನು ತೆಗೆದುಕೊಳ್ಳುವುದು.

ಮಾಹಿತಿ ಹಕ್ಕು ಅಧಿನಿಯಮದಡಿ ಯಾರೆಲ್ಲಾ ಬರುತ್ತ್ತಾರೆ?

ಕೇಂದ್ರ ಮಾಹಿತಿ ಹಕ್ಕು ಅಧಿನಿಯಮವು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಅನ್ವಯಿಸುತ್ತದೆ. ಭಾರತ ಸಂವಿಧಾನದಡಿ ಅಥವಾ ಯಾವುದೇ ಕಾನೂನಿನಡಿ ಅಥವಾ ಯಾವುದೇ ಸರ್ಕಾರಿ ಅಧಿಸೂಚನೆಯಡಿ ಸ್ಥಾಪಿತವಾದಂತಹ ಎಲ್ಲಾ ಸಂಸ್ಥೆಗಳು ಅಥವಾ ಸರ್ಕಾರಿ ಒಡೆತನದ, ನಿಯಂತ್ರಣದ ಅಥವಾ ಸರ್ಕಾರದಿಂದ ಗಣನೀಯವಾಗಿ ಆರ್ಥಿಕ ನೆರೆವು ಪಡೆಯುತ್ತಿರು ಸರ್ಕಾರೇತರ ಸಂಘ ಸಂಸ್ಥೆಗಳೂ ಸೇರಿದಂತೆ ಎಲ್ಲಾ ನಿಯಮಗಳು ಈ ಅಧಿನಿಯಮದ ವ್ಯಾಪ್ತಿಗೆ ಬರುತ್ತದೆ.

ನಿಮಗೆ ಮಾಹಿತಿಯನ್ನು ಯಾರು ನೀಡಲಿದ್ದಾರೆ?

ಪ್ರತಿಯೊಂದು ಸರ್ಕಾರಿ ಇಲಾಖೆಯಲ್ಲಿ ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ಹಾಲಿ ಸೇವೆಯಲ್ಲಿರುವ ಅಧಿಕಾರಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಗಳನ್ನಾಗಿ ಪದನಾಮೀಕರಿಸಲಾಗಿದೆ. ನೀವು ನಿಮ್ಮ ಅರ್ಜಿಗಳನ್ನು ಅವರಿಗೆ ಸಲ್ಲಿಸಬೇಕು. ಅವರು ಆ ಇಲಾಖೆಯ ಬೇರೆ ಬೇರೆ ಶಾಖೆಗಳಿಂದ ತಾವು ಕೋರಿದ ಮಾಹಿತಿಯನ್ನು ಸಂಗ್ರಿಹಿಸಿ, ಆ ಮಾಹಿತಿಯನ್ನು ನಿಮಗೆ ಒದಗಿಸುವುದಕ್ಕೆ ಜವಾಬ್ದಾರರಾಗಿರುತ್ತಾರೆ. ಜೊತೆಗೆ, ಅನೇಕ ಅಧಿಕಾರಿಗಳನ್ನು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನಾಗಿ (ಎಪಿಐಒ ಗಳು) ನೇಮಿಸಲಾಗಿದೆ. ಅವರ ಕೆಲಸ ಕೇವಲ ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಸ್ವೀಕರಿಸಿ, ಅವುಗಳನ್ನು ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿಕೊಡುವುದಾಗಿರುತ್ತದೆ.

ನೀವು ನಿಮ್ಮ ಅರ್ಜಿಯನ್ನು ಎಲ್ಲಿ ಸಲ್ಲಿಸಬಹುದು?

ನೀವು ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ (ಸ.ಸಾ.ಮಾ.ಅ) ಇವರ ಬಳಿ ಅರ್ಜಿ ಸಲ್ಲಿಸಬಹುದು ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳ ಸಂದರ್ಭದಲ್ಲಿ, 629 ಅಂಚೆ ಕಚೇರಿಗಳನ್ನು ಸ.ಸಾ.ಮಾ.ಅ ಗಳನ್ನಾಗಿ ಪದನಾಮೀಕರಿಸಲಾಗಿದೆ ಈ ಅಂಚೆ ಕಚೇರಿಗಳಲ್ಲಿರುವ ಮಾಹಿತಿ ಹಕ್ಕು ಕೌಂಟರ್‍ನಲ್ಲಿ ನಿಮ್ಮ ಶುಲ್ಕ ಮತ್ತು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳಿಗಾಗಿ ಈ ವೆಬ್‍ಸೈಟ್‍ನಲ್ಲಿ ರಾಜ್ಯಗಳು ರಚಿಸಿದ ನಿಯಮಗಳನ್ನು ನೋಡಿ. ಮಾಹಿತಿ ಪಡೆಯುವುದಕ್ಕಾಗಿ, ನೀವು ಕೇಂದ್ರ ಸರ್ಕಾರಿ ಇಲಾಖೆಗಳಿಗೆ ಒದಗಿಸಲಾದ ಮಾಹಿತಿಯ ಪ್ರತಿ ಪುಟವೊಂದಕ್ಕೆ 2 ರೂಪಾಯಿಗಳನ್ನು ಪಾವತಿಸಬೇಕು. ಇದು ಬೇರೆ ಬೇರೆ ರಾಜ್ಯಗಳಿಗೆ ಬೇರೆ ಬೇರೆಯಾಗಿರುತ್ತದೆ. ಅದೇ ರೀತಿ, ದಾಖಲೆಗಳ ತಪಾಸಣೆಗೂ ಶುಲ್ಕವಿರುತ್ತದೆ. ತಪಾಸಣೆಯ ಮೊದಲ ಗಂಟೆಗೆ ಶುಲ್ಕವಿರುವುದಿಲ್ಲ ಆದರೆ ಆ ನಂತರ ತಾವು ಪ್ರಕಿಯೊಂದು ತರುವಾಯದ ಗಂಟೆಗೂ ಅಥವಾ ಅದರ ಭಾಗಕ್ಕೂ 5ರೂಪಾಯಿಗಳನ್ನು ಪಾವತಿಸಬೇಕು. ಇದು ಕೇಂದ್ರ ನಿಯಮಗಳ ಪ್ರಕಾರವಾಗಿರುತ್ತದೆ. ಪ್ರತಿಯೊಂದು ರಾಜ್ಯಕ್ಕೆ ಸಂಬಂಧಿಸಿದಂತೆ ತಾವು ಸಂಬಂಧಪಟ್ಟ ರಾಜ್ಯ ನಿಯಮಗಳನ್ನು ನೋಡಿ. ನೀವು ಶುಲ್ಕವನ್ನು ನಗದು ರೂಪದಲ್ಲಾಗಲೀ ಅಥವಾ ನೀವು ಯಾವ ಸಾರ್ವಜನಿಕ ಪ್ರಾಧಿಕಾರದಿಂದ ಮಾಹಿತಿ ಪಡೆಯಬೇಕಾಗಿದೆಯೇ ಆ ಸಾರ್ವಜನಿಕ ಪ್ರಾಧಿಕರದ ಹೆಸರಿಗೆ ಪಡೆದ ಅಥವಾ ಬ್ಯಾಂಕರ್ ಚೆಕ್ಕುಗಳ ಮೂಲಕವಾಗಲೀ ಅಥವಾ ಪೋಸ್ಟಲ್ ಆರ್ಡರ್‍ಗಳ ಮೂಲಕವಾಗಲೀ ಪಾವತಿಸಬಹುದು. ಕೆಲವು ರಾಜ್ಯಗಳಲ್ಲಿ, ನ್ಯಾಯಾಲಯ ಶುಲ್ಕ ಸ್ಟಾಂಪುಗಳನ್ನು ಖರೀದಿಸಿ ಅದನ್ನು ಅರ್ಜಿಗೆ ಅಂಟಿಸಬಹುದು. ಇದನ್ನು ನೀವು ಶುಲ್ಕ ಪಾವತಿಸಿದಂತೆಯೇ ಪರಿಗಣಿಸಲಾಗುವುದು. ನಂತರ ನೀವು ಅರ್ಜಿಯನ್ನು ಅಂಚೆ ಮೂಲಕವಾಗಲೀ ಇಲ್ಲವೆ ಖುದ್ದಾಗಿಯಾಗಲೀ ಸಲ್ಲಿಸಬಹುದು.

ನೀವು ಅದನ್ನು ಹೇಗೆ ಠೇವಣಿ ಮಾಡಬಹುದು?

ಹೌದು, ಅರ್ಜಿ ಶುಲ್ಕವಿದೆ. ಕೇಂದ್ರ ಸರ್ಕಾರದ ಇಲಾಖೆಗಳಿಗೆ ಇದು 10 ರೂ. ಆದರೆ, ವಿವಿಧ ರಾಜ್ಯಗಳು ವಿಭಿನ್ನ ಶುಲ್ಕವನ್ನು ನಿಗದಿಪಡಿಸಿವೆ. ವಿವರಗಳಿಗಾಗಿ ಈ ವೆಬ್‌ಸೈಟ್‌ನಲ್ಲಿ ರಾಜ್ಯಗಳು ರೂಪಿಸಿದ ನಿಯಮಗಳನ್ನು ನೋಡಿ. ಮಾಹಿತಿ ಪಡೆಯಲು, ನೀವು ಕೇಂದ್ರ ಸರ್ಕಾರದ ಇಲಾಖೆಗಳಿಗೆ ಒದಗಿಸಿದ ಮಾಹಿತಿಯ ಪುಟಕ್ಕೆ 2 ರೂ. ಇದು ವಿವಿಧ ರಾಜ್ಯಗಳಿಗೆ ವಿಭಿನ್ನವಾಗಿದೆ. ಅಂತೆಯೇ, ದಾಖಲೆಗಳ ಪರಿಶೀಲನೆಗೆ ಶುಲ್ಕವಿದೆ. ತಪಾಸಣೆಯ ಮೊದಲ ಗಂಟೆಗೆ ಯಾವುದೇ ಶುಲ್ಕವಿಲ್ಲ, ಆದರೆ ನಂತರ, ನೀವು ರೂ. 5 ಪ್ರತಿ ನಂತರದ ಗಂಟೆ ಅಥವಾ ಅದರ ಭಾಗಕ್ಕೆ. ಇದು ಕೇಂದ್ರ ನಿಯಮಗಳ ಪ್ರಕಾರ. ಪ್ರತಿ ರಾಜ್ಯಕ್ಕಾಗಿ, ಆಯಾ ರಾಜ್ಯ ನಿಯಮಗಳನ್ನು ನೋಡಿ. ನೀವು ಶುಲ್ಕವನ್ನು ನಗದು ರೂಪದಲ್ಲಿ ಅಥವಾ ಡಿಡಿ ಅಥವಾ ಬ್ಯಾಂಕರ್‌ಗಳ ಚೆಕ್ ಅಥವಾ ಪೋಸ್ಟಲ್ ಆರ್ಡರ್ ಮೂಲಕ ಆ ಸಾರ್ವಜನಿಕ ಪ್ರಾಧಿಕಾರದ ಪರವಾಗಿ ಠೇವಣಿ ಮಾಡಬಹುದು. ಕೆಲವು ರಾಜ್ಯಗಳಲ್ಲಿ, ನೀವು ನ್ಯಾಯಾಲಯದ ಶುಲ್ಕದ ಅಂಚೆಚೀಟಿಗಳನ್ನು ಖರೀದಿಸಬಹುದು ಮತ್ತು ಅದನ್ನು ನಿಮ್ಮ ಅರ್ಜಿಯಲ್ಲಿ ಅಂಟಿಸಬಹುದು. ನೀವು ಶುಲ್ಕವನ್ನು ಠೇವಣಿ ಮಾಡಿದಂತೆ ಇದನ್ನು ಪರಿಗಣಿಸಲಾಗುತ್ತದೆ. ನಂತರ ನೀವು ನಿಮ್ಮ ಅರ್ಜಿಯನ್ನು ಅಂಚೆ ಮೂಲಕ ಅಥವಾ ಕೈಯಿಂದ ಠೇವಣಿ ಮಾಡಬಹುದು.

ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂಬಂಧಪಟ್ಟ ಇಲಾಖೆಯು ನಿಮ್ಮ ಅರ್ಜಿಯನ್ನು ಸ್ವೀಕರಿಸದಿದ್ದರೆ ನೀವು ಏನು ಮಾಡಬೇಕು?

ನೀವು ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ನೀವು ಪ್ರಕರಣ 18ರ ಮೇರೆಗೆ ಸಂಬಂಧಪಟ್ಟ ಮಾಹಿತಿ ಆಯೋಗಕ್ಕೆ ಒಂದು ವಿದ್ಯುಕ್ತ ದೂರನ್ನು ಕೂಡ ಸಲ್ಲಿಸಬೇಕು. ನಿಮ್ಮ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸದರೆ ಅಂತಹ ಸಂಬಂಧಪಟ್ಟ ಅಧಿಕಾರಿಯ ಮೇಲೆ ರೂ. 25,000/- ದಂಡ ವಿಧಿಸುವ ಅಧಿಕಾರವನ್ನು ಮಾಹಿತಿ ಆಯುಕ್ತರು ಹೊಂದಿರುತ್ತಾರೆ.

ಮಾಹಿತಿ ಕೋರುವುದಕ್ಕೆ ಯಾವುದಾದರೂ ನಿರ್ದಿಷ್ಟ ಅರ್ಜಿ ನಮೂನೆ ಇದೆಯೇ?

ಕೇಂದ್ರ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ ನಮೂನೆ ಇರುವುದಿಲ್ಲ. ನೀವು ಒಂದು ಸಾಮಾನ್ಯ ಅರ್ಜಿಯ ರೀತಿಯಲ್ಲಿ ಸಾದಾ ಕಾಗದದ ಹಾಳೆಯಲ್ಲೇ ಅರ್ಜಿ ಸಲ್ಲಿಸಬೇಕು. ಆದರೂ, ಬಹಳಷ್ಟ ರಾಜ್ಯಗಳು ಮತ್ತು ಕೆಲವು ಮಂತ್ರಾಲಯಗಳು ಹಾಗೂ ಇಲಾಖೆಗಳು ನಿಗಧಿತ ನಮೂನೆಗಳನ್ನು ಹೊಂದಿವೆ. ನೀವು ಈ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ತಿಳಿಯಲು ದಯಮಾಡಿ ಸಂಬಂಧಪಟ್ಟ ರಾಜ್ಯಗಳ ನಿಯಮಗಳನ್ನು ಓದಿ.

ನೀವು ಮಾಹಿತಿಗಾಗಿ ಹೇಗೆ ಅರ್ಜಿ ಸಲ್ಲಿಸಬಹುದು?

ಸಾಮಾನ್ಯ ಕಾಗದದ ಹಾಳೆಯಲ್ಲಿ ನಿಮ್ಮ ಅರ್ಜಿಯನ್ನು ಬರೆದು, ಸಾರ್ವಜನಿಕ ಮಾಹಿತಿ ಅಧಿಕಾರ (ಪಿಐಒ) ಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಅದನ್ನು ಸಲ್ಲಿಸಬೇಕು. (ನಿಮ್ಮ ವೈಯಕ್ತಿಕ ಉಲ್ಲೇಖಕ್ಕಾಗಿ ಅರ್ಜಿಯ ಒಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟು ಕೊಳ್ಳುವುದನ್ನು ಮರೆಯಬೇಡಿ).

ನೀವು ನಿಮ್ಮ ಅರ್ಜಿ ಶುಲ್ಕವನ್ನು ಹೇಗೆ ಪಾವತಿಸಬಹುದು?

ಪ್ರತಿಯೊಂದು ರಾಜ್ಯವು ಅರ್ಜಿ ಶುಲ್ಕಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಪಾವತಿ ವಿಧಾನಗಳನ್ನು ಹೊಂದಿವೆ. ಸಾಮಾನ್ಯವಾಗಿ, ನೀವು ಈ ಕೆಳಕಂಡ ವಿಧಾನಗಳ ಮೂಲಕ ನಿಮ್ಮ ಅರ್ಜಿ ಶುಲ್ಕವನನು ಪಾವತಿಸಬಹುದು.

  • ಖುದ್ದಾಗಿ ನಗದು ಪಾವತಿಸುವ ಮೂಲಕ (ನಿಮ್ಮ ರಸೀದಿ ಪಡೆಯುವುದನ್ನು ಮರೆಯಬೇಡಿ)
  • ಅಂಚೆ ಮೂಲಕ.
  • ಡಿಮ್ಯಾಂಡ್ ಡ್ರಾಪ್ಟ್ ಮೂಲಕ.
  • ಇಂಡಿಯನ್ ಪೋಸ್ಟಲ್ ಆರ್ಡರ್ ಮೂಲಕ.
  • ಮನಿ ಆರ್ಡರ್ ಮೂಲಕ (ಕೆಲವು ರಾಜ್ಯಗಳಲ್ಲಿ ಮಾತ್ರ).
  • ಕೋರ್ಟ್ ಫೀ ಸ್ಯಾಂಪ್ ಅಂಟಿಸುವ ಮೂಲಕ (ಕೆಲವು ರಾಜ್ಯದಲ್ಲಿ ಮಾತ್ರ).
  • ಬ್ಯಾಂಕರ್ಸ್ ಚೆಕ್ ಮೂಲಕ.

ಕೆಲವು ರಾಜ್ಯ ಸರ್ಕಾರಗಳು ಕೆಲ ಲೆಕ್ಕ ಶೀರ್ಷಿಕೆಗಳನ್ನು ನಿಗಧಿಪಡಿಸಿವೆ. ನೀವು ಆ ಖಾತೆಯಲ್ಲಿ ಶುಲ್ಕವನ್ನು ಠೇವಣಿ ಮಾಡಬೇಕಾಗುತ್ತದೆ. ಅದಕ್ಕಾಗಿ, ನೀವು ಎಸ್‍ಬಿಐ ಯಾವುದೇ ಶಾಖೆಗೆ ಹೋಗಿ ಸದರಿ ಖಾತೆಗೆ ಹಣವನ್ನು ಜಮಮಾಡಿ ನಿಮ್ಮ ಮಾಹಿತಿ ಹಕ್ಕು ಅರ್ಜಿಯೊಡನೆ ಶುಲ್ಕ ಪಾವತಿಸಿ ರಸೀದಿಯನ್ನು ಲಗತ್ತಿಸಬಹುದು ಅಥವಾ ನೀವು ನಿಮ್ಮ ಮಾಹಿತಿ ಹಕ್ಕು ಅರ್ಜಿಯೊಡನೆ ಆ ಲೆಕ್ಕ ಶೀರ್ಷಿಕೆಯ ಹೆಸರಿನಲ್ಲಿ ಪಡೆದ ಪೋಸ್ಟಲ್ ಆರ್ಡರ್ ಅಥವಾ ಹಿಡಿಯನ್ನು ಕೂಡ ಸಲ್ಲಿಸಬಹುದು. ಮಾಹಿತಿ ಹಕ್ಕು ಅಧಿನಿಯಮ, 2005 ರಡಿ ಮಾಹಿತಿ ಕೋರುವ ಅರ್ಜಿ ನಮೂನೆ.

ಮಾಹಿತಿ ಹಕ್ಕು ಅಧಿನಿಯಮ, 2005 ರಡಿ ಮಾಹಿತಿ ಕೋರುವ ಅರ್ಜಿ ನಮೂನೆ.

ನೀವು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಬಿಎಂಆರ್‍ಸಿಎಲ್ ವೆಬ್‍ಸೈಟ್‍ನಿಂದ ಪಿಡಿಎಫ್ ನಲ್ಲಿರುವ ಈ ಕೆಳಕಂಡ ಅರ್ಜಿ ನಮೂನೆಯನ್ನು ಡೌನಲೋಡ್ ಮಾಡಿಕೊಳ್ಳಬಹುದು.

ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿ ಶುಲ್ಕದೊಡನೆ ಗ್ರಾಹಕರ ಸಂಪರ್ಕ ಕೋಶ, ಕಚೇರಿಯಲ್ಲಿ ಸಲ್ಲಿಸಬಹುದು.

1. ಮಾಹಿತಿ ಹಕ್ಕು ಅಧಿನಿಯಮ, 2005 ರಡಿ ಮಾಹಿತಿ ಕೋರಿರುವ ಅರ್ಜಿ ನಮೂನೆ.

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಹಕ್ಕು ಅಧಿನಿಯಮ 2005ರ ಸೆಕ್ಷನ 4.1(ಬಿ) ಅಡಿಯಲ್ಲಿ ಮಾಹಿತಿ ಪ್ರಕಟಣೆ

 ಕ್ರಮ ಸಂಖ್ಯೆ
ಸೂಚಿ/ವಿವರಗಳು/ಕಡತ ಸಂಖ್ಯೆ
ಪ್ರಕಟಿಸಲಾದ ಮಾಹಿತಿ
 ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ
 ಸಾರ್ವಜನಿಕ ಪ್ರಾಧಿಕಾರ. ಮೊದಲನೇ ಮೇಲ್ಮನವಿ ಪ್ರಾಧಿಕಾರ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ ಸಂಪರ್ಕ ವಿವರಗಳು

ಸಂಪರ್ಕ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

1ಮಾಹಿತಿ ಹಕ್ಕು ಅಧಿನಿಯಮ, 2005 ರ ಸೆಕ್ಷನ 4.1(ಬಿ) ಅಡಿಯಲ್ಲಿ ಮಾಹಿತಿ
 

ಆಡಳಿತ/ಮಾನವ ಸಂಪನ್ಮೂಲ ಶಾಖೆ:

(i) ಸಂಸ್ಥೆಯ ವಿವರಗಳು

(ii) ಸಿಬ್ಬಂದಿ ಮತ್ತು ಅಧಿಕಾರಿಗಳ, ಅಧಿಕಾರ ಮತ್ತು ಕರ್ತವ್ಯಗಳು

(iii) ನಿರ್ಣಯ ತೆಗೆದುಕೊಳ್ಳುವುದಕ್ಕೆ ಅನುಸರಿಸಲಾಗುವ ವಿಧಿವಿಧಾನ

(iv)ಪ್ರಕಾರ್ಯಗಳನ್ನು ನಿರ್ವಹಿಸಲು ವಿಧಿಸಲಾದ ಸೂತ್ರಗಳು

(v) ಪ್ರಕಾರ್ಯಗಳನ್ನು ನಿರ್ವಹಿಸಲು ಇರುವ ನಿಯಮಗಳು ವಿನಿಯಮಗಳು, ಸೂಚನೆಗಳು ಕೈಪಿಡಿಗಳು ಮತ್ತು ದಾಖಲೆಗಳು

(vi) ಸಂಸ್ಧೆಯ ನಿಯಂತ್ರಣದಲ್ಲಿ ಇರುವ ದಾಖಲೆಗಳ ವರ್ಗೀಕರಣ ಪಟ್ಟಿ

(vii) ಸಾರ್ವಜನಿಕರು ಸಮಾಲೋಚಿಸಲು ಮತ್ತು ನಿವೇದಿಸಲು, ಹಾಲಿ ಚಾಲ್ತಿಯಲ್ಲಿರುವ ವ್ಯವಸ್ಥೆಗಳ ಕುರಿತಾದ ವಿವರಗಳು

(viii) ರಚಿಸಲಾದ ಆಡಳಿತ ಮಂಡಳಿ, ಕೌನ್ಸಿಲ್ ಸಮಿತಿಗಳು ಮತ್ತು ಇತರೆ ಮಂಡಳಿಗಳ ಪಟ್ಟಿ

(ix) ಸಂಸ್ಥೆಯು ನೀತಿ ನಿರ್ಣಯಗಳನ್ನು ರೂಪಿಸಲು ಮತ್ತು ಅನುಷ್ಠಾನಗಳಿಸುವ ಬಗ್ಗೆ

(x) ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ನೀಡಲಾಗುವ ವೇತನ ಮತ್ತು ಪರಿಹಾರಗಳು ವಿನಿಯಮಗಳಲ್ಲಿದಂತೆ

(xi) ಪ್ರತಿ ಏಜಿನ್ಸಿಗೆ ಹಂಚಿಕೆ ಮಾಡಲಾದ ಆಯವ್ಯೆಯ

(xii) ಸಹಾಯಧನ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ಕುರಿತಾದ ವಿಧಾನ

(xiii) ರಿಯಾಯಿತಿಗಳು ಪರ್ಮಿಟ್ಟು, ಅಥವಾ ಅಧಿಕಾರ ಪತ್ರಗಳನ್ನು ನಿಡಲಾಗಿದ್ದು ಇವುಗಳನ್ನು ಪಡೆದವರ ಕುರಿತಾದ ವಿವರಗಳು

(xiv) ಇಲೆಕ್ಟ್ರಾನಿಕ್ ಮಾದರಿಯಲ್ಲಿ ಲಭ್ಯವಿರುವ ಮಾಹಿತಿ

(xv) ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಲು ಲಭ್ಯವಿರುವ ಸೌಲಭ್ಯಗಳ ವಿವರಗಳು





ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

2

ಮಾಹಿತಿ ಹಕ್ಕು ಅಧಿನಿಯಮ ವಿಭಾಗ

(i) ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ವಿನಾಯತಿ

ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ ಈ ಕೆಳಕಂಡಂತೆ ದಾಖಲೆಗಳನ್ನು ವಾಣಿಜ್ಯ ರಹಸ್ಯ ವ್ಯಾಪಾರ ಗೌಪ್ಯತೆಗಳು ಎಂದು ಪರಿಗಣಿಸಿ ಅವುಗಳನ್ನು ಬಹಿರಂಗ ಪಡೆಸುವುದರಿಂದ ವಿನಾಯಿತಿಸಲಾಗಿದೆ.
ಪ್ರಕರಣ 8(1) (ಎ) :-
1 ಭದ್ರತೆ ದೃಷ್ಠಿಯಿಂದ ಡ್ರಾಯಿಂಗ್ಸ್, ನಿಲ್ದಾಣದ ನಕ್ಷೆ ಮತ್ತು ಇತರೆ ಸಿವಿಲ್ ನಿರ್ಮಾಣಗಳು ಇವುಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ.
ಪ್ರಕರಣ 8(1) (ಡಿ) :-
1. ಆಡಳಿತ ಮಂಡಳಿಯ ಸಭಾ ಸೂಚಿ ಆದೇಶ
2. ಉನ್ನತಮಟ್ಟದ ಅಧಿಕಾರಿಗಳ ಸಭೆ ನಡಾವಳಿಗಳು
3. ಗುತ್ತಿಗೆದಾರರೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ವಾಣಿಜ್ಯ ಗೌಪ್ಯತೆಯಿಂದಾಗಿ
4. ತಾಂತ್ರಿಕ ಮತ್ತು ಆರ್ಥಿಕ ಬಿಡ್ (ಸವಾಲು) ಮಾಡಲಾದ ಪೂರ್ವಾರ್ಹತೆ ಮತ್ತು ಅರ್ಹತೆ ಉಳ್ಳ ಬಿಡ್ಡರ್ಸ್ (ಸವಾಲುದಾರರು)
ಪ್ರಕರಣ 8(1) (ಎಫ್) :-

1. ಭಾಹ್ಯ ಮೂಲಗಳಿಂದ ಮತ್ತು ಆರ್ಥಿಕ ಸಂಸ್ಥೆಗಳೊಂದಿಗೆ ಮಾಡಿಕೊಳ್ಳಲಾದ ಒಪ್ಪಂದಗಳು. ಇಂದಿನ ದಿನಾಂಕ ದಂತೆ ಬಿಎಂಆರ್‍ಸಿಎಲ್ ಜಪಾನ್ ಮತ್ತು ಅಂತರ ರಾಷ್ಟ್ರೀಯಾ ಸಹಕಾರಿ ಏಜಿನ್ಸಿಗಳೊಂದಿಗೆ ಸಾಲದ ಒಪ್ಪಂದ ಮಾಡಿಕೊಳ್ಳಲಾದ ಒಪ್ಪಂದಗಳು.

 (ii)ಪಟ್ಟಿ ಮಾಡಲಾದ ಅಂಶಗಳು/ದಾಖಲೆಗಳನ್ನು ಬಿಎಂಆರ್‍ಸಿಎಲ್ (ಸಾರ್ವಜನಿಕ ಪ್ರಾಧಿಕಾರ) ಮಾಹಿತಿ ಹಕ್ಕು ಅಧಿನಿಯಮ 2005 ರ ಅಡಿಯಲ್ಲಿ ಬಹಿರಂಗ ಪಡಿಸಲು ಉಪಕರಿಸುವುದು (Not Obliged)ಪಟ್ಟಿಯ್ನನು ವೀಕ್ಷೀಸಲುನ ಇಲ್ಲಿ ಕ್ಲಿಕ್ ಮಾಡಿ
 (iii) ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಬಿಎಂಆರ್‍ಸಿಎಲ್ ನಲ್ಲಿ ನೇಮಕಾ ಮಾಡುವುದು ಸಂಖ್ಯೆ: ಬಿಎಂಆರ್‍ಸಿಎಲ್/ಲಾಓ/ಆರ್‍ಟಿಐ ಆ್ಯಕ್ಟ್/ ನಂ. 1/2006/4717 ದಿನಾಂಕ 02.04.2014
ಕಛೇರಿ ಆದೇಶ
ಸಂಖ್ಯೆ ಹೆಚ್‍ಆರ್/55/2014

ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ 5ರಲ್ಲಿನ ಅವಕಾಶಗಳಡಿಯಲ್ಲಿ ಶ್ರೀ ಪದ್ಮರಾಜು, ವ್ಯವಸ್ಥಾಪಕ, ಬಿಎಂಆರ್‍ಸಿಎಲ್ ಇವರನ್ನು ಈ ಮೂಲಕ ಮುಂದಿನ ಆದೇಶದವರಗೆ ಸಾರ್ವಜನಿಕ ಮಾಹಿತಿ ಅಧಿಕಾರಿ ಎಂದು ಪದನಾಮಕರಿಸಿದೆ..

ಆದೇಶಾನುಸಾರ

ಸಹಿ/-
ವ್ಯವಸ್ಥಾಪಕ ನಿರ್ದೇಶಕರುr

ಕಛೇರಿ ಆದೇಶ
ಸಂಖ್ಯೆ. ಹೆಚ್‍ಆರ್/55/2014
 (iv)ಮೊದಲನೇ ಮೇಲ್ಮನವಿ ಪ್ರಾಧಿಕಾರವನ್ನು ನೇಮಿಸುವುದು
ಸಂಖ್ಯೆ. ಬಿಎಂಆರ್‍ಸಿಎಲ್/ಲಾಓ/ಆರ್‍ಟಿಐ ಆ್ಯಕ್ಟ್/ ನಂ. 1/2006/4717 ದಿನಾಂಕ 02.04.2014
ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ 19 (1) ರ ಅಡಿಯಲ್ಲಿನ ಅವಕಾಶದನ್ವಯ ಮತ್ತು ನಿಯಮಗಳ ಅಡಿಯಲ್ಲಿ ರಚಿಸಲಾದ ನಿಯಮಗಳ ಅವಕಾಶದಡಿಯಲ್ಲಿಶ್ರೀ. ಯು. ಜಗದೀಶ್ ನಾಯಕ್, ಕಂಪನಿ ಕಾರ್ಯದರ್ಶಿ, ಬಿಎಂಆರ್‍ಸಿಎಲ್ ಇವರನ್ನು ಈ ಮೂಲಕ ಬಿಎಂಆರ್‍ಸಿಎಲ್ ಸಂಸ್ಥೆಯ ಮೊದಲನೇ ಮೇಲ್ಮನವಿ ಪ್ರಾಧಿಕಾರ ಎಂದು ಪದನಾಮಿಕರಿಸಿದೆ. ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ 19(1) ರಡಿಯಲ್ಲಿ ಸಲ್ಲಿಸಲಾಗುವ ಮೊದಲನೇ ಮೇಲ್ಮನವಿಗಳ ಬಗ್ಗೆ ನಿಯಮದಡಿಯಲ್ಲಿ ವಿಚಾರಣೆ ನಡಿಸಿ ಇತ್ಯರ್ಥಗೊಳಿಸುವುದು.

ಆದೇಶಾನುಸಾರ

ಸಹಿ/-
ವ್ಯವಸ್ಥಾಪಕ ನಿರ್ದೇಶಕರು
 (v) ಆರ್.ಟಿ.ಐ. ವಾರ್ಷಿಕ ವರದಿ

2013-14
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (vi)ಆರ್.ಟಿ.ಐ. ವಾರ್ಷಿಕ ವರದಿ

2015-16
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (vii)ಆರ್.ಟಿ.ಐ. ವಾರ್ಷಿಕ ವರದಿ

2016-17
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (viii)ಆರ್.ಟಿ.ಐ. ವಾರ್ಷಿಕ ವರದಿ

2018-19
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (ix) ಆರ್.ಟಿ.ಐ. ವಾರ್ಷಿಕ ವರದಿ

2019-20
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (x) ಆರ್.ಟಿ.ಐ. ವಾರ್ಷಿಕ ವರದಿ

2020-21
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (xi) ಆರ್.ಟಿ.ಐ. ವಾರ್ಷಿಕ ವರದಿ

2021-22
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (xii) ಆರ್.ಟಿ.ಐ. ವಾರ್ಷಿಕ ವರದಿ

2022-23
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (xiii) ಆರ್.ಟಿ.ಐ. ವಾರ್ಷಿಕ ವರದಿ

2023-24
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
3ಮಾಹಿತಿ ಹಕ್ಕು ಅಧಿನಿಯಮ 2005ರ ಸೆಕ್ಷನ 4.1(ಎ) ಅಡಿಯಲ್ಲಿ ನಿಗಧಿಪಡಿಸಲಾದ ನಮೂನೆಯಲ್ಲಿ ಮಾಹಿತಿ ಬಹಿರಂಗ ಪಡಿಸುವುದು
 (i) ಭೂಸ್ವಾಧೀನR1E - ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
R2E - ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
R3C - ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
R4B - ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
R5- ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
R6 - ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (ii) ಸಿಗ್ನಲಿಂಗ್ ಮತ್ತು ಟ್ರಾಕ್ಷನ್ / ಎಎಫ್‍ಸಿವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (iii) ಸಿವಿಲ್-ಸುರಂಗ
GYT file list-ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Reach-1 & Track Work of Phase 1 - RTI updation-ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (iv) ವಿದ್ಯುತ್ವಿದ್ಯುತ್ - ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Contract - Systems - ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

EMTr ECS-TVS Lift esc- ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Rolling Stock - ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
RTI DEPO-ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
S&T-ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (v) ಐಟಿ ವಿಭಾಗವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (vi) ಕಾನೂನು ವಿಭಾಗವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (vii) ಆಸ್ತಿ ಅಭಿವೃದ್ಧಿ (ಹಣಕಾಸು)ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (viii) ಸೆಕ್ರ್ರೆಟಾರಿಯಲ್ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (ix) ಕಾಂಟ್ರಾಕ್ಟ್ ಸಿಸ್ಟಮ್ಸ್ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (x) ರೋಲಿಂಗ್ ಸ್ಟಾಕ್ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (xi) ಕಾಂಟ್ರಾಕ್ಟ್ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
  (xii) ಹೆಚ್‌ ಆರ್‌ ಲೈನ್‌-2ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 (xiii) ರೀಚ್‌ 3ಸಿವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
4ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತದ ವಾರ್ಷಿಕ ವರದಿಗಳು
 2020-21ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 2019-20ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 2018-19ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 2017-18ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 2016-17ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 2015-16ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
2014-15ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

5

ಸ್ವೀಕರಿಸಲಾದ ಅರ್ಜಿಗಳು ಮತ್ತು ಶೇಖರಿಸಿಲಾದ ಶುಲ್ಕ 2015-16 ರಿಂದ 31/03/2016 ರವರಿಗೆ


ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...