ಮೆಟ್ರೋ ಶಿಷ್ಟಾಚಾರಗಳು

ಟಿಕೆಟ್ ಕೌಂಟರ್‌ಗಳು

  • ಟಿಕೆಟ್ ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ವರ್ತಿಸಿ

    ಸರಿಯಾದ ಚಿಲ್ಲರೆಯನ್ನು ಒದಗಿಸುವ ಮೂಲಕ ಸಹಕರಿಸಿ

    ಸರದಿಯನ್ನು ಪಾಲಿಸಿ

    ಕೌಂಟರ್‌ನಿಂದ ಹೊರಡುವ ಮೊದಲು ಟಿಕೆಟ್ ದರ ಅಥವಾ ರೀಚಾರ್ಜ್ ಮೊತ್ತ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

  • ಟಿಕೆಟ್ ಕಛೇರಿಯಲ್ಲಿ ತೊಂದರೆಯನ್ನು ಉಂಟುಮಾಡಬೇಡಿ

    ಟಿಕೆಟ್‌ಗಳನ್ನು ವಿರೂಪಗೊಳಿಸಬೇಡಿ

    ನಿಮ್ಮ ಟಿಕೆಟ್‌ಗಳನ್ನು ಕಳೆದುಕೊಳ್ಳಬೇಡಿ.

ತಿರುಗು ಮೆಟ್ಟಿಲುಗಳು (ಎಸ್ಕಲೇಟರ್ಸ್)

  • ಯಾವಾಗಲೂ ಹಿಡಿಗಂಬಿಯನ್ನು ಹಿಡಿದುಕೊಳ್ಳಿ

    ಚಲಿಸುತ್ತಿರುವ ದಿಕ್ಕಿನ ಕಡೆಗೆ ಮುಖ ಮಾಡಿ

    ಮಕ್ಕಳು, ಹಿರಿಯರು ಮತ್ತು ಅಂಗವಿಕಲರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ

    ತಿರುಗು ಮೆಟ್ಟಿಲುಗಳು (ಎಸ್ಕಲೇಟರುಗಳು) ನಿಂತುಹೋದರೆ ದಯವಿಟ್ಟು ಮೆಟ್ಟಿಲುಗಳನ್ನು ಬಳಸಿ

    ತಿರುಗು ಮೆಟ್ಟಿಲು (ಎಸ್ಕಲೇಟರ್) ಕಾರ್ಯನಿರ್ವಹಿಸದಿದ್ದರೆ ದಯವಿಟ್ಟು ಗ್ರಾಹಕ ಸೇವಾ ಕೇಂದ್ರಕ್ಕೆ ಮಾಹಿತಿ ನೀಡಿ

    ಬೇರೆಯವರಿಗೆ ವೇಗವಾಗಿ ನಡೆಯಲು ಅವಕಾಶವಾಗುವಂತೆ ಮಾಡಿಕೊಡಲು ದಯವಿಟ್ಟು ಎಡಭಾಗದಲ್ಲೇ ನಿಲ್ಲಿ

  • ತಿರುಗು ಮೆಟ್ಟಿಲುಗಳ (ಎಸ್ಕಲೇಟರ್‍ಗಳ) ಮೇಲೆ ಕುಳಿತುಕೊಳ್ಳುವುದು ಅಥವಾ ಆಟವಾಡುವುದು

    ತಿರುಗು ಮೆಟ್ಟಿಲುಗಳ (ಎಸ್ಕಲೇಟರ್ಗಳ) ತುದಿಯ ಮೇಲೆ ಒರಗುವುದು

    ತಿರುಗು ಮೆಟ್ಟಿಲುಗಳನ್ನು (ಎಸ್ಕಲೇಟರ್ಗಳನ್ನು) ಒಂಟಿಯಾಗಿ ಬಳಸಲು ಮಕ್ಕಳಿಗೆ ಅವಕಾಶ ಮಾಡಿಕೊಡುವುದು

    ತಿರುಗು ಮೆಟ್ಟಿಲುಗಳ (ಎಸ್ಕಲೇಟರ್ಗಳಿಂದ) ಇಳಿದಾಣ/ಏರುದಾಣ ಪ್ರದೇಶದಲ್ಲಿ ನಿಲ್ಲುವುದು ಅಥವಾ ಕಾಯುವುದು

    ತಿರುಗು ಮೆಟ್ಟಿಲುಗಳ (ಎಸ್ಕಲೇಟರ್)ಗಳ ಮೇಲೆ ಕೈಬಂಡಿ, ಸಾಮಾನು ಸರಂಜಾಮನ್ನು ತೆಗೆದುಕೊಳ್ಳುವುದು.

ಎಎಫ್‍ಸಿ ದ್ವಾರಗಳು

  • ಮೊದಲು ಹಿರಿಯರು ಮತ್ತು ಮಕ್ಕಳಿಗೆ ಹೋಗಲು ಅವಕಾಶ ಮಾಡಿಕೊಡಿ.

    ದ್ವಾರದ ಮೂಲಕ ಹಾದುಹೋಗುವಾಗ ನಿಮ್ಮ ವಸ್ತುಗಳು ಮತ್ತು ಬಟ್ಟೆಗಳು ದ್ವಾರಗಳಿಗೆ ತಾಗದಂತೆ ಹಿಡಿದುಕೊಳ್ಳಿ.

    ದ್ವಾರದ ಮೂಲಕ ಹಾದು ಹೋಗುವಾಗ ನಿಮ್ಮ ಮಕ್ಕಳ ಬಗ್ಗೆ ಜಾಗರೂಕತೆ ವಹಿಸಿ. 3 ಅಡಿಗಿ೦ತ ಕಡಿಮೆ ಎತ್ತರವಿರುವ ಮಕ್ಕಳನ್ನು ನಿಮ್ಮ ಮುಂದೆ ನಿಮಗೆ ಹತ್ತಿರ ಇರಿಸಿಕೊಳ್ಳಿ ಅಥವಾ ವಯಸ್ಕರು ಎತ್ತಿಕೊಳ್ಳಿ.

    ಸ್ಮಾರ್ಟ್‍ಕಾರ್ಡ್ ಹೊಂದಿರುವವರು ನಿರ್ಗಮನ ದ್ವಾರಗಳಲ್ಲಿ ಪ್ರವೇಶ ಮತ್ತು ನಿರ್ಗಮನದ ಬಗ್ಗೆ ಖಚಿತಪಡಿಸಿಕೊಳ್ಳಿ.

  • ಗುಂಪಿನಲ್ಲಿರುವಾಗ ಬಲವಂತವಾಗಿ ದ್ವಾರಗಳನ್ನು ಪ್ರವೇಶಿಸಲು/ನಿರ್ಗಮಿಸಲು ಯತ್ನಿಸುವುದು.

    ದ್ವಾರದ ಮೂಲಕ ಹಾದುಹೋದ ನಂತರ ಹಠಾತ್ತನೆ ನಿಂತು ಹಿಂತಿರುಗುವುದು.

    ದ್ವಾರದ ಮೂಲಕ ಹಾದು ಹೋಗುವಾಗ ವಿರಾಮಿಸಿವುದು.

    ಪ್ರವೇಶ ನಿರ್ಗಮನಕ್ಕಾಗಿ ಎಎಫ್ಸಿ ದ್ವಾರಗಳ ಮೇಲಿನಿಂದ ಜಿಗಿಯಲು ಯತ್ನಿಸುವುದು.

ಪ್ಲಾಟ್‍ಫಾರ್ಮ್

  • ರೈಲಿಗಾಗಿ ಕಾಯುತ್ತಿರುವಾಗ ಸರದಿ ಸಾಲಿನಲ್ಲಿ ನಿಲ್ಲಿ.

    ಮೊದಲು ರೈಲಿನಿಂದ ಹೊರಬರುವ ಪ್ರಯಾಣಿಕರಿಗೆ ಅವಕಾಶ ಮಾಡಿಕೊಡಿ.

    ರೈಲು ಮತ್ತು ಪ್ಲಾಟ್‍ಫಾರ್ಮ್ ತುದಿಯ ನಡುವಿನ ಅಂತರ ದಾಟುವಾಗ ಅಂತರದ ಬಗ್ಗೆ ಗಮನಿಸಿ.

    ಬಾಗಿಲುಗಳು ಮುಚ್ಚಿಕೊಳ್ಳಲು ಪ್ರಾರಂಭಿಸಿದಲ್ಲಿ ಮುಂದಿನ ರೈಲಿಗಾಗಿ ಕಾಯಿರಿ.

    ಪ್ಲಾಟ್‍ಫಾರ್ಮ್ ತುದಿಯ ಬಳಿ ಹಳದಿ ಗೆರೆಯಿಂದ ಹಿಂದೆ ನಿಲ್ಲಿ.

    ನಿಮ್ಮ ವಸ್ತುಗಳು ಹಳಿಯ ಮೇಲೆ ಬಿದ್ದರೆ, ನಮ್ಮ ಮೆಟ್ರೋ ಸಿಬ್ಬಂದಿಯನ್ನು ಸಂಪರ್ಕಿಸಿ.

    ಯಾವುವೇ ಉಪೇಕ್ಷಿತ ವಸ್ತುಗಳು ಕಂಡುಬಂದಲ್ಲಿ ನಿಲ್ದಾಣ ಸಿಬ್ಬಂದಿಗೆ ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿಗೆ ತಿಳಿಸುವುದು.

  • ಹಳಿಯ ಮೇಲೆ ಬಿದ್ದಂಥ ವಸ್ತುಗಳನ್ನು ಸ್ವತಃ ನೀವೇ ಎತ್ತಿಕೊಳ್ಳಲು ಪ್ರಯತ್ನಿಸುವುದು.

    ಪ್ಲಾಟ್‍ಫಾರ್ಮ್ ತುದಿಯಲ್ಲಿ ವಾಲುವುದು.

    ಕುತೂಹಲದಿಂದ ಚಲಿಸುತ್ತಿರುವ ರೈಲಿನ ಬಳಿ ಬರುವುದು.

    ಪ್ಲಾಟ್‍ಫಾರ್ಮ್ ಪ್ರದೇಶಗಳಾಚೆ ನುಗ್ಗುವುದು.

    ರೈಲಿನ ಬಾಗಿಲುಗಳು ಮುಚ್ಚಿಕೊಳ್ಳುತ್ತಿರುವಾಗ ಅವುಗಳನ್ನು ತಡೆಯುವುದು.

    ಹಳಿಯ ಮೇಲೆ ಬಿದ್ದಂಥ ವಸ್ತುಗಳನ್ನು ಸ್ವತಃ ನೀವೇ ಎತ್ತಿಕೊಳ್ಳಲು ಪ್ರಯತ್ನಿಸುವುದು.

ರೈಲಿನ ಒಳಗೆ

  • ರೈಲಿನ ಬಾಗಿಲುಗಳಿಂದ ದೂರ ನಿಲ್ಲುವುದು

    ದಯವಿಟ್ಟು ನಿಮ್ಮ ಆಸನಗಳನ್ನು ಮಕ್ಕಳು, ಗರ್ಭಿಣಿಯರು ಮತ್ತು ಹಿರಿಯ ಪ್ರಯಾಣಿಕರಿಗೆ ಬಿಟ್ಟುಕೊಡಿ.

    ನಿಂತುಕೊಂಡಿರುವಾಗ ಯಾವಾಗಲೂ ಕೈಕಂಬಿಗಳು ಅಥವಾ ಸ್ಟ್ರಾಪ್ ಹ್ಯಾಂಗರ್‍ಗಳನ್ನು ಹಿಡಿದುಕೊಂಡು ನಿಲ್ಲಿ

    ವ್ಹೀಲ್‍ಚೇರ್ ಪ್ರಯಾಣಿಕರಿಗಾಗಿ ಯಾವಾಗಲೂ ಸುರಕ್ಷಾ ಪಟ್ಟಿಗಳನ್ನು ಬಳಸಿ

    ಯಾವಾಗಲೂ ನಿಮ್ಮ ವಸ್ತುಗಳ ಬಳಿ ಕುಳಿತುಕೊಳ್ಳಿ ಅಥವಾ ನಿಂತುಕೊಳ್ಳಿ

  • ರೈಲು ಬಾಗಿಲುಗಳ ಮೇಲೆ ಒರಗಿ ನಿಲ್ಲುವುದು

    ರೈಲು ಬಾಗಿಲುಗಳ ಮೇಲೆ ಅಥವಾ ಬಾಗಿಲ ತುದಿಗಳ ಮೇಲೆ ನಿಮ್ಮ ಕೈಯನ್ನಿರಿಸುವುದು

    ಅಂಗವಿಕಲರಿಗೆ ವಿಶೇಷವಾಗಿ ಮೀಸಲಿರಿಸಿದ ಆಸನಗಳಲ್ಲಿ ದಯವಿಟ್ಟು ಕುಳಿತುಕೊಳ್ಳಬೇಡಿ

    ತುರ್ತು ಪರಿಸ್ಥಿತಿಯ ಹೊರತು ರೈಲಿನಲ್ಲಿನ ಯಾವುದೇ ಗುಂಡಿಯನ್ನು ಎಳೆಯುವುದು ಅಥವಾ ಒತ್ತುವುದು

    ರೈಲಿನಲ್ಲಿನ ಯಾವುದೇ ಸೂಚನಾಫಲಕಗಳ ಮೇಲೆ ಗೀರು ಹಾಕುವುದು ಅಥವಾ ವಿರುಪಗೊಳಿಸುವುದು

    ರೈಲಿನ ನೆಲದ ಹಾಸಿನ ಮೇಲೆ ಚಕ್ಕಳಬಕ್ಕಳ ಹಾಕಿ ಕುಳಿತುಕೊಳ್ಳುವುದು

    ರೈಲಿನಲ್ಲಿ ಕುಡಿಯುವುದು ಅಥವಾ ತಿನ್ನುವುದು

    ರೈಲು ಅಥವಾ ನಿಲ್ದಾಣಗಳಲ್ಲಿ ಧೂಮಪಾನ ಮಾಡುವುದು.

    ಹಾಡುವ ಮೂಲಕ, ವಾದ್ಯವನ್ನು ನುಡಿಸುವ ಮೂಲಕ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಜೋರಾಗಿ ಸಂಗೀತವನ್ನು ನುಡಿಸುವ ಮೂಲಕ ಉಪದ್ರವವನ್ನು ಉಂಟುಮಾಡುವುದು.

ಮೆಟ್ರೋ ವ್ಯವಸ್ಥೆಯಲ್ಲಿ ನಿಷೇದಿತ ವಸ್ತುಗಳ ಪಟ್ಟಿ

  • ಹರಿತವಾದ ವಸ್ತುಗಳು: ಖುಖ್ರಿ, ಕತ್ತಿ, 10 ಸೆಂ.ಮೀ ಅಂದರೆ 4 ಇಂಚಿಗೂ ಹೆಚ್ಚು ಉದ್ದದ ಬ್ಲೇಡ್ ಹೊಂದಿರುವ ಚಾಕು, 10 ಸೆಂ.ಮೀ ಅಂದರೆ 4 ಇಂಚಿಗಿಂತ ಹೆಚ್ಚು ಕತ್ತರಿಸುವ ತೋಳುಗಳನ್ನು ಹೊಂದಿರುವ ಕತ್ತರಿ, ಮಾಂಸ ಸೀಳುವ ಆಯುಧ.

    ಗನ್‌ಗಳು ಮತ್ತು ಬಂದೂಕುಗಳು: ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಫ್ಲೇರ್ ಗನ್, ಸ್ಪೋರ್ಟ್ಸ್ ಗನ್, ಏರ್ ರೈಫಲ್, ಬಿಬಿ ಗನ್, ಸಂಕುಚಿತ ಏರ್ ಗನ್, ಪೆಲೆಟ್ ಗನ್, ಸ್ಟಾರ್ಟರ್ ಪಿಸ್ತೂಲ್, ಗನ್ ಲೈಟರ್, ಸ್ಟನ್ ಗನ್, ಆಘಾತಕಾರಿ ಸಾಧನಗಳು, ಗನ್‌ಗಳ ಮತ್ತು ಬಂದೂಕುಗಳ ಭಾಗಗಳು, ಶಸ್ತ್ರಾಸ್ತ್ರಗಳ/ ಮದ್ದುಗುಂಡುಗಳ ನೈಜ ಪ್ರತಿಕೃತಿ.

    ಪರಿಕರಗಳು:ಕೊಡಲಿ & ಹ್ಯಾಟ್ಚೆಟ್, ಕ್ರೌಬಾರ್, ಸುತ್ತಿಗೆ, ಸೀಳುಕತ್ತಿ, ಗರಗಸ, ಸ್ಕ್ರೂ ಡ್ರೈವರ್, ವ್ರೆಂಚ್, ಇಕ್ಕಳ ಮತ್ತು 7 ಇಂಚುಗಳಿಗಿಂತ ಅಂದರೆ 17.5 ಸೆಂ.ಮೀ ಗಿಂತ ಹೆಚ್ಚು ಉದ್ದದ ಇತರ ಪರಿಕರಗಳು.

    ಸ್ಫೋಟಕ ವಸ್ತುಗಳು: ಗನ್ ಪೌಡರ್, ಡೈನಮೈಟ್, ಪಟಾಕಿ, ಹ್ಯಾಂಡ್ ಗ್ರೆನೇಡ್, ಪ್ಲಾಸ್ಟಿಕ್ ಸ್ಫೋಟಕಗಳು, ಸ್ಫೋಟಕಗಳ ನೈಜ ಪ್ರತಿಕೃತಿ.

    ದಹಿಸುವ ವಸ್ತುಗಳು: ಪೆಟ್ರೋಲಿಯಂ, ಏರೋಸಾಲ್ ಅಥವಾ ಇತರ ದಹಿಸುವ ದ್ರವಗಳು, ಎಲ್ಲಾ ರೀತಿಯ ಸ್ಪಿರಿಟ್‌ಗಳು, ವೆಟ್ ಬ್ಯಾಟರಿಗಳು, ದಹಿಸುವ ಘನವಸ್ತುಗಳು‌.

    ನಿಷ್ಕ್ರಿಯಗೊಳಿಸುವ ರಾಸಾಯನಿಕಗಳು ಮತ್ತು ಇತರ ಅಪಾಯಕಾರಿ ವಸ್ತುಗಳು: ವಿಕಿರಣಶೀಲ ವಸ್ತುಗಳು, ಆಮ್ಲಗಳು ಮತ್ತು ಇತರ ನಾಶಕಗಳು, ವಿಷಕಾರಿ ವಸ್ತುಗಳು, ಒತ್ತಡದಲ್ಲಿ ಸಂಕುಚಿತಗೊಳಿಸಿದ, ದ್ರವೀಕರಿಸಿದ ಅಥವಾ ಕರಗಿಸಿದ ಅನಿಲಗಳು, ಅಶ್ರುವಾಯು.

    ಕಾನೂನು ಬಾಹಿರ ವಸ್ತುಗಳು: ಒಣಗಿದ, ಹೆಪ್ಪುಗಟ್ಟಿದ ಅಥವಾ ಕೊಳೆತ ಮಾನವ ಅಥವಾ ಪ್ರಾಣಿಯ ರಕ್ತ, ಶವಗಳು, ಸತ್ತ ಪ್ರಾಣಿಗಳ ಮೃತದೇಹಗಳು, ಬಿಳುಪುಗೊಳಿಸದ ಮತ್ತು ಸ್ವಚ್ಛಗೊಳಿಸದ ಮೂಳೆಗಳು, ಯಾವುದೇ ರೀತಿಯ ಗೊಬ್ಬರ, ತೈಲಯುಕ್ತ ಚಿಂದಿ, ಯಾವುದೇ ಕೊಳೆತ ಪ್ರಾಣಿಗಳು ಅಥವಾ ತರಕಾರಿ ಪದಾರ್ಥಗಳು, ಮಾನವ ಅಸ್ಥಿಪಂಜರ, ಮಾನವ ದೇಹದ ಭಾಗ, ಮುಚ್ಚಿರದ ಸಸಿಗಳು, ಮುಚ್ಚಿರದ ಹಸಿ ಮಾಂಸ/ಮೀನು.

    ಇತರೆ: ಸಾಕು ಪ್ರಾಣಿಗಳು ಮತ್ತು ಪಕ್ಷಿಗಳು

    ಸೂಚನೆ :

    ಪ್ರಯಾಣಿಕರು ಒಯ್ಯುವ ಶಸ್ತ್ರಚಿಕಿತ್ಸಾ ಸಾಧನಗಳ ಕಿಟ್ ಅನ್ನು ಮೆಟ್ರೋ ವ್ಯವಸ್ಥೆಯಲ್ಲಿ ಸಾಗಿಸಲು ಸಂಬಂಧಪಟ್ಟ ಪ್ರಯಾಣಿಕರು ನಿಲ್ದಾಣದಲ್ಲಿ ಲಭ್ಯವಿರುವ ರಿಜಿಸ್ಟರ್‌ನಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡತಕ್ಕದ್ದು, ಭದ್ರತಾ ಪರಿಶೀಲನೆಯ ನಂತರ ಶಸ್ತ್ರಚಿಕಿತ್ಸಾ ಸಾಧನಗಳ ಕಿಟ್ ಅನ್ನು ಮೆಟ್ರೋ ವ್ಯವಸ್ಥೆಯಲ್ಲಿ ಸಾಗಿಸಲು ಅನುಮತಿಸಲಾಗುತ್ತದೆ. ಶಸ್ತ್ರಚಿಕಿತ್ಸಾ ಕಿಟ್ ಅನ್ನು ಕೊಂಡೊಯ್ಯಲು ರಾಷ್ಟ್ರೀಯ ವೈದ್ಯಕೀಯ ಆಯೋಗ / ಭಾರತೀಯ ದಂತ ಪರಿಷತ್ / ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆಯ ನೋಂದಾಯಿತ ವೈದ್ಯರು ಅಥವಾ ಅಧಿಕೃತ ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿಯ ಪ್ರತಿಯನ್ನು ಸಲ್ಲಿಸಿದಲ್ಲಿ ಮಾತ್ರ ಅನುಮತಿಸಲಾಗುತ್ತದೆ.

    ಸಿಖ್ ಪ್ರಯಾಣಿಕರು `ಕೃಪಾನ್` ಅನ್ನು ಧಾರ್ಮಿಕ ಸಂಕೇತವಾಗಿ ಸಾಗಿಸಲು / ಧರಿಸಲು ಅನುಮತಿಸಲಾಗಿದೆ. ಅದರ ಉದ್ದವು 23 ಸೆಂ.ಮೀ ಅಂದರೆ 9 ಇಂಚುಗಳಿಗಿಂತ ಹೆಚ್ಚು ಇರಬಾರದು ಮತ್ತು ಅದರ ಬ್ಲೇಡ್ ಉದ್ದ 15 ಸೆಂ.ಮೀ ಅಂದರೆ 6 ಇಂಚುಗಳಿಗಿಂತ ಹೆಚ್ಚು ಇರಬಾರದು.

    ಸಾಮಾನ್ಯ ಟೂಲ್ ಕಿಟ್ ಅನ್ನು ಸರಿಯಾದ ಭದ್ರತಾ ಪರಿಶೀಲನೆ ಮತ್ತು ಅದನ್ನು ಒಯ್ಯುತ್ತಿರುವ ಪ್ರಯಾಣಿಕರು ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳ ಬಳಿ ಲಭ್ಯವಿರುವ ರಿಜಿಸ್ಟರ್‌ನಲ್ಲಿ ನಮೂದಿಸಿದ ನಂತರ ಅನುಮತಿಸಲಾಗುತ್ತದೆ.

image
image
image
ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...