ನಿಲ್ದಾಣದಲ್ಲಿನ ಸೌಲಭ್ಯಗಳು

ಗ್ರಾಹಕ ಸೇವಾ ಕೇಂದ್ರ/ಕೌಂಟರುಗಳು

ಪ್ರಯಾಣಿಕರು ತಮ್ಮ ಟಿಕೇಟುಗಳ ಬಗೆಗಿನ ಯಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ಸಹಾಯ ಪಡೆಯಲು ನಿಲ್ದಾಣಗಳಲ್ಲಿ ಗ್ರಾಹಕ ಸೇವಾ ಕೆಂದ್ರ/ಕೌಂಟರುಗಳನ್ನು ಸ್ಥಾಪಿಸಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ನಡುವೆ ಸ್ಥಾಪಿಸಲಾಗಿದ್ದು, ಸಂದಾಯಿತ ಮತ್ತು ಸಂದಾಯರಹಿತ ಪ್ರದೇಶಗಳೆರಡರಿಂದಲೂ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ದರಗಳನ್ನು ಸಂದಾಯ ಮಾಡುವ ಅಗತ್ಯವಿರುವಂಥವರು ಅಥವಾ ಸರಿಯಾಗಿ ಕೆಲಸ ಮಾಡದಿರುವ ಟಿಕೇಟುಗಳಿಗೆ ಸಂಬಂಧಿಸಿದಂತೆ ಸಹಾಯ ಪಡೆಯಬಯಸುವವರು ಸಹ ನಿಲ್ದಾಣಗಳಲ್ಲಿನ ಗ್ರಾಹಕ ಸೇವಾ ಕೌಂಟರು/ಕೇಂದ್ರಗಳಿಗೆ ಭೇಟಿ ನೀಡಬಹುದು.

about
app-img

ಪ್ರಯಾಣಿಕರ ಮಾಹಿತಿ ಪ್ರದರ್ಶನ ಫಲಕಗಳು

ಪ್ರಯಾಣಿಕರ ಮಾಹಿತಿ ಪ್ರದರ್ಶನ ಫಲಕಗಳನ್ನು, ಸ್ವಯಂಚಾಲಿತ ದ್ವಾರಗಳು ಮತ್ತು ಪ್ಲಾಟ್‍ಫಾರ್ಮ್ ಬಳಿ ರೈಲುಗಳ ಆಗಮನದ ಬಗ್ಗೆ ಪ್ರಯಾಣಿಕರಿಗೆ ವಾಸ್ತವವಾದ ಸಮಯದ ಮಾಹಿತಿ ಒದಗಿಸಲು ಅಳವಡಿಸಲಾಗಿದೆ.

ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...