ಜಾಹೀರಾತು

ಜಾಹೀರಾತು

ಪರಿಣಾಮಕಾರಿ ಜಾಹೀರಾತು ಫಲಕಗಳನ್ನು ಸರಿಯಾದ ಸ್ಥಳದಲ್ಲಿ ಪ್ರದರ್ಶಿಸಿದಾಗ ಮಾತ್ರ ಅದರ ಪ್ರಭಾವವು ಹೆಚ್ಚಾಗುತ್ತದೆ. ಬಿಎಂಆರ್‌ಸಿಎಲ್ ಬೆಂಗಳೂರು ನಗರದ ಪ್ರಮುಖ ಸ್ಥಳದಲ್ಲಿ ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ. ʼನಮ್ಮ ಮೆಟ್ರೋʼದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಓಡಾಡುತ್ತಿದ್ದು, ಕಾರ್ಪೋರೇಟ್‌ ಸಂಸ್ಥೆಗಳಿಗೆ ತಮ್ಮ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಸಹಕಾರಿಯಾಗುತ್ತದೆ. ಬಿಎಂಆರ್‌ಸಿಎಲ್ ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಮೆಟ್ರೋ ರೈಲಿನ ಒಳಗೆ ಜಾಹೀರಾತಿಗಾಗಿ ಗಮನ ಸೆಳೆಯುವ ಸ್ಥಳಗಳನ್ನು ಒದಗಿಸುತ್ತಿದೆ. ಸ್ಟ್ಯಾಂಡೀಸ್, ಗೋಡೆಯ ಬಿಲ್‌ಬೋರ್ಡ್‌ಗಳು, ಪ್ರಚಾರದ ಕಿಯೋಸ್ಕ್‌ಗಳು ಮತ್ತು ಮೆಟ್ರೋ ರೈಲುಗಳ ಮೂಲಕ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಅವಕಾಶಗಳನ್ನು ಪಡೆಯಬಹುದು. ಬಿಎಂಆರ್‌ಸಿಎಲ್ ಜಾಹೀರಾತು ಪ್ರದರ್ಶಿಸಲು ಇತರೆ ಯಾವುದೇ ಮಾಧ್ಯಮಗಳ ಮೂಲಕ ಹಾಗೂ ನವೀನ ಮಾದರಿಗಳನ್ನು ಪರಿಗಣಿಸಲು ಸ್ವಾಗತಾರ್ಹ ಆಯ್ಕೆಗಳನ್ನು ನೀಡುತ್ತದೆ. ಆಸಕ್ತ ಕಾರ್ಪೊರೇಟ್‌ಗಳು, ಮಾರಾಟಗಾರರು, ಜಾಹೀರಾತು ಸಂಸ್ಥೆಗಳು, ವಾಣಿಜ್ಯ ಉದ್ಯಮಗಳು, ಬ್ಯಾಂಕ್‌ಗಳು, ಸಹಕಾರ ಸಂಘಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಆಭರಣದ ಅಂಗಡಿಗಳು, ಇತ್ಯಾದಿಗಳು ಜಾಹೀರಾತು ಪ್ರದರ್ಶನಕ್ಕಾಗಿ ಬಿಎಂಆರ್‌ಸಿಎಲ್ಅನ್ನು ಸಂಪರ್ಕಿಸಬಹುದು.

Email: pd@bmrc.co.in

Phone: 080 – 22969280 / 22969274

retail
ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...