ದರ ನಿಯಮಗಳು

image

ದರ ನಿಯಮಗಳು

 • 3 ಅಡಿಗಿಂತ ಕಡಿಮೆ ಎತ್ತರ ಇರುವ ಪ್ರಯಾಣಿಕರಿಗೆ ಟಿಕೇಟುಗಳನ್ನು ಪಡೆಯುವ ಅಗತ್ಯವಿರುವುದಿಲ್ಲ.ವಯಸ್ಸಿನ ಮಾನದಂಡವನ್ನು ಪರಿಗಣಿಸುವುದಿಲ್ಲ.

 • ಸ್ವಯಂಚಾಲಿತ ದ್ವಾರವು ಒಂದು ಬಾರಿಗೆ ಒಬ್ಬರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಪ್ರಯಾಣಿಕನು ಒಂದು ಟೋಕನ್ ಅಥವಾ ಸ್ಮಾರ್ಟ್ಕಾರ್ಡನ್ನು ಹೊಂದಿರಲೇಬೇಕು

 • ಯಾವುದೇ ಪ್ರವೇಶ ಅಥವಾ ನಿರ್ಗಮಿಸುವಾಗ ಗೇಟ್ ದಲ್ಲಿ ಕಾರ್ಡ ಅಥವಾ ಟೊಕನ್ ತೊರಿಸದಿದ್ದಲ್ಲಿ ಇದನ್ನು MISMATCH ಎಂದು ಕರೆಯಲಾಗುತ್ತದೆ ಮತ್ತು ಇಂತಹ ಸಂಧರ್ಬದಲ್ಲಿ 10 ರೂ ದಂಡವನ್ನು ವಿಧಿಸಲಾಗುವುದು. ನಿಲ್ದಾಣವನ್ನು ಪ್ರವೇಶಿಸಿದ್ದಕ್ಕಾಗಿ ಕನಿಷ್ಟ ದರವನ್ನು ವಿದಿಸಲಾಗುವುದು.

 • ಟಿಕೇಟ್ ರಹಿತ ಪ್ರಯಾಣ ಮಾಡಿದರೆ ಅಥವಾ ಟಿಕೆಟ್ ಕಳೆದುಕೊಂಡರೆ ಗರಿಷ್ಠ ಟೋಕನ್ ದರದ ಮೊತ್ತ ಮತ್ತು ರೂ.200/- ದಂಡ ವಿಧಿಸಲಾಗುವುದು

 • ಹೊಂದಿಕೆಯಾಗದಿರುವುದು : ಸ್ವಯಂಚಾಲಿತ ಗೇಟ್ಸ್, ಟೋಕನ್ / ಸ್ಮಾರ್ಟ್ ಕಾರ್ಡ್ನಲ್ಲಿ ಪ್ರವೇಶ / ನಿರ್ಗಮನ ವಿವರಗಳನ್ನು ದಾಖಲಿಸುತ್ತದೆ. ಈ ಗೇಟ್ಗಳಲ್ಲಿನ ಪ್ರತಿ ಪ್ರವೇಶವನ್ನು ಅದೇ ದಿನ, ಗೇಟ್ಗಳ ಮೂಲಕ ಸರಿಯಾದ ನಿರ್ಗಮನವನ್ನು ಹೊಂದಿರಬೇಕು.


 • ಅವಧಿ ಮೀರಿ ಉಳಿಯುವಿಕೆ ಕುರಿತು ನಿಯಮ : ಟಿಕೆಟ್ ಹೊಂದಿರುವ ಪ್ರಯಾಣಿಕರು ಅದೇ ನಿಲ್ದಾಣದ ಸಂದಾಯಿತ ಪ್ರದೇಶ (ಪೆಡ್ ಎರಿಯಾ) ದಿಂದ 20 ನಿಮಿಷಗಳ ಒಳಗೆ ಮತ್ತು ಇತರ ನಿಲ್ದಾಣಗಳ ಪಾವತಿಸಿದ ಪ್ರದೇಶದಿಂದ 120 ನಿಮಿಷಗಳ ಒಳಗೆ ನಿರ್ಗಮಿಸಬೇಕು. ಈ ಮಿತಿಗಳನ್ನು ಮೀರಿ ಹೆಚ್ಚು ತಂಗಿದ್ದಕ್ಕಾಗಿ, ಗಂಟೆಗೆ ರೂ 50 ರಂತೆ ಗರಿಷ್ಠ 100 ರೂ ದಂಡವನ್ನು ವಿಧಿಸಲಾಗುವುದು.


 • ಲಗೇಜ್ ಮಿತಿ :ಒಬ್ಬ ವ್ಯಕ್ತಿಗೆ ಗರಿಷ್ಠ 60 cm x 45 cm x 25 cm (ಉದ್ದ x ಅಗಲ x ಎತ್ತರ) ಆಯಾಮದೊಂದಿಗೆ ಒಂದು ಲಗೇಜ್ ಅನ್ನು ಕೊಂಡೊಯ್ಯಲು ಅನುಮತಿಸಲಾಗಿದೆ. ಪ್ರಯಾಣಿಕರು ಹೆಚ್ಚುವರಿ ಲಗೇಜ್/ಹೆಚ್ಚುವರಿ ಸಾಮಾನು ಸರಂಜಾಮು ಮತ್ತು ದೊಡ್ಡ ಗಾತ್ರದ ಸಾಮಾನು ಸರಂಜಾಮುಗಳನ್ನು ಕೊಂಡೊಯ್ಯಲು ಅನುವು ಮಾಡಿಕೊಡಲು, ಪ್ರತಿ ಲಗೇಜ್ ಗೆ 30/- ರೂಪಾಯಿ ದರ ವಿಧಿಸಲಾಗುತ್ತದೆ. ಈ ಲಗೇಜ್ ಟಿಕೆಟ್ ಅನ್ನು ಕಸ್ಟಮರ್ ಕೇರ್ ಸೆಂಟರ್ (ಸಿಸಿಸಿ) ನಿಂದ ಖರೀದಿಸಬಹುದು.


  ಹೆಚ್ಚುವರಿ ಬ್ಯಾಗೇಜ್ಗೆ ಟಿಕೆಟ್ ಖರೀದಿಸದಿದ್ದರೆ, ರೂ .250/- ದಂಡವನ್ನು ವಿಧಿಸಲಾಗುವುದು. ಯಾವುದೇ ವಿವಾದದ ಸಂದರ್ಭದಲ್ಲಿ, ಆ ಪ್ರಯಾಣಿಕರಿಗೆ ಪ್ರಯಾಣಕ್ಕಾಗಿ ಟಿಕೆಟ್ ಹೊಂದಿದ್ದರೂ, ಮೆಟ್ರೋ ರೈಲ್ವೆ ಆಡಳಿತದ ಯಾವುದೇ ಅಧಿಕೃತ ಮೆಟ್ರೊ ರೈಲ್ವೆ ಅಧಿಕಾರಿಗಳು ಅಥವಾ ಮಟ್ರೋ ರೈಲು ಅಧಿಕಾರಿಗಳ ನೆರವಿಗೆ ಪಡೆದ ಯಾವುದೆ ವ್ಯಕ್ತಿ ರೈಲಿನಿಂದ ಹೊರಹಾಕಲು ತೆಗೆದುಹಾಕಲು ಅಧಿಕಾರ ಉಳ್ಳವರಾಗಿರುತ್ತಾರೆ.


 • ಸ್ಮಾರ್ಟ್ ಕಾರ್ಡ್ನಲ್ಲಿರುವ ಪ್ರಯಾಣ ದರ ಸಿಂದುತ್ವ ವಿಸ್ತರಣೆ : ಸ್ಮಾರ್ಟ್ ಕಾರ್ಡ್ನಲ್ಲಿನ ಸಂಗ್ರಹಿತ ಮೌಲ್ಯವು ಕೊನೆಯ ಕಾರ್ಡ್ ಟಾಪ್-ಅಪ್ ಮೌಲ್ಯದ ದಿನಾಂಕದಿಂದ ಹತ್ತು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. 20/- ರೂ.ಗಳ ಆಡಳಿತಾತ್ಮಕ ಶುಲ್ಕವನ್ನು ಯಾವುದೇ ನಿಲ್ದಾಣದ ಕಸ್ಟಮರ್ ಕೇರ್ ಸೆಂಟರ್ನಲ್ಲಿ ಪಾವತಿಸುವ ಮೂಲಕ ಸಿಂಧುತ್ವ ವಿಸ್ತರಣೆಯನ್ನು ಮಾಡಬಹುದು.

image

ಟೋಕನ್‍ಗಳಿಗಾಗಿ ನಿಯಮಗಳು

 • ಟಿಕೆಟ್ ಕಚೇರಿ ನಿರ್ವಾಹಕನು ಒoದು ಬಾರಿಗೆ ಒಬ್ಬ ಪ್ರಯಾಣಿಕನಿಗೆ ನೀಡಬಹುದಾದ ಗರಿಷ್ಟ ಟೋಕನ್ಗಳ ಸಂಖ್ಯೆ ಆರು ಮಾತ್ರ.

 • ಪ್ರಯಾಣ ಪೂರ್ಣಗೊಂಡ ನಂತರ ನಿರ್ಗಮನ ದ್ವಾರದ ಬಳಿ ಟೋಕನ್ಗಳನ್ನು ವಶಪಡಿಸಿಕೊಳ್ಳಲಾಗುತ್ತದೆ.

 • ಟೋಕನ್ ಮಾನ್ಯತೆಯ ಅವಧಿ:

  • ಯಾವುದೇ ರೀತಿಯ ಟೋಕನ್ ಖರೀದಿಸಿದ ದಿನಕ್ಕೆ ಮಾತ್ರ ಮಾನ್ಯವಾಗಿರುತ್ತದೆ.

  • ಖರಿದಿ ಮಾಡಿದ ಸಮಯದಿಂದ ಗರಿಷ್ಠ 30 ನಿಮಿಷದ ವರೆಗೆ ಮಾತ್ರ ಪ್ರವೇಶ ದ್ವಾರದಲ್ಲಿ ಬಳಕೆಗೆ ಇದು ಮಾನ್ಯವಾಗಿದೆ.

 • ಪ್ರಯಾಣಿಕರು ಟೋಕನ್ ಖರೀದಿಸಿದ ನಿಲ್ದಾಣದ ಗೇಟ್‌ಗಳಿಂದಲೆ ಪ್ರವೇಶಿಸಬೇಕು.

 • ಅವಧಿ ಮೀರಿ ಉಳಿಯುವಿಕೆ ಕುರಿತು ನಿಯಮ : ಟಿಕೆೆಟ್ ಹೊಂದಿರುವ ಪ್ರಯಾಣಿಕರು ಅದೇ ನಿಲ್ದಾಣದ ಪಾವತಿಸಿದ ಪ್ರದೇಶ (ಪೆಡ್ ಎರಿಯಾ) ದಿಂದ 20 ನಿಮಿಷಗಳ ಒಳಗೆ ಮತ್ತು ಇತರ ನಿಲ್ದಾಣಗಳ ಪಾವತಿಸಿದ ಪ್ರದೇಶದಿಂದ 120 ನಿಮಿಷಗಳ ಒಳಗೆ ನಿರ್ಗಮಿಸಬೇಕು. ಈ ಮಿತಿಗಳನ್ನು ಮೀರಿ ಹೆಚ್ಚು ತಂಗಿದ್ದಕ್ಕಾಗಿ, ಗಂಟೆಗೆ ರೂ 50 ರಂತೆ ಗರಿಷ್ಠ 100 ರೂ ದಂಡವನ್ನು ವಿಧಿಸಲಾಗುವುದು.

 • ಪ್ರಯಾಣಿಕನು ನಿರ್ಗಮನ ದ್ವಾರದಲ್ಲಿ ಟೋಕನ್ಅನ್ನು ಠೇವಣಿ ಮಾಡದೆ, ತೆಗೆದುಕೊಂಡು ಹೋದರೆ 200.00 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ.

 • ಟೋಕನ್ ದರದ ಯಾವುದೇ ಭಾಗಶಃ ಮರುಪಾವತಿ ಇಲ್ಲ.

app-img

ಸಂಗ್ರಹಿತ ಮೌಲ್ಯ ಟಿಕೆಟಿಗಾಗಿ (ವಾರ್ಷಿಕ್) ನಿಯಮಗಳು

ಟಾಪ್-ಅಪ್

ಬಿ.ಎಂ.ಆರ್.ಸಿ.ಎಲ್ ಯಾವುದೇ ನಿಲ್ದಾಣಗಳಲ್ಲಿರುವ ಟಿಕೆಟ್ ಕಚೇರಿಗಳಲ್ಲಿ ಮೌಲ್ಯವನ್ನು ಸ್ಮಾರ್ಟ್ಕಾರ್ಡಿಗೆ ಸೇರಿಸಬಹುದು. ನಿಲ್ದಾಣಗಳ ಹೊರತಾಗಿ, ಮೌಲ್ಯವನ್ನು ಟಾಪ್ಅಪ್ ಮಾಡಲು ವ್ಯಾಪಕ ಆಯ್ಕೆಗಳಿವೆ, ಉದಾಹರಣೆಗೆ ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್, ನಿಗಮದ ವೆಬ್ ಸೈಟ್, ಪೆಟಿಎಮ್, ಅಮೇಜಾನ್ ಪೇ ಇತ್ಯಾದಿ.

ಆದಾಗ್ಯೂ, BMRCL ವೆಬ್ಸೈಟ್ ಅಥವಾ ಮೊಬೈಲ್ ಒನ್ ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್ ಸ್ಮಾರ್ಟ್ ಕಾರ್ಡ್ ಮೂಲಕ ರೀಚಾರ್ಜ್ ಅನ್ನು ಪ್ರಾರಂಭಿಸಿದ ನಂತರ, 15 ದಿನಗಳಲ್ಲಿ, ಯಾವುದೇ BMRCL ಮೆಟ್ರೋ ನಿಲ್ದಾಣದ ಸ್ವಯಂಚಾಲಿತ ಗೇಟ್ (AG) ಅಥವಾ ಕಾರ್ಡ್ ಟಾಪ್ ಅಪ್ ಟರ್ಮಿನಲ್ (CTT) ನ ಪ್ರವೇಶ ಭಾಗದಲ್ಲಿ ಕಾರ್ಡನ್ನು ಪ್ರಸ್ತುತಪಡಿಸಬೇಕು.

ಅಂತಹ ಆನ್ಲೈನ್ ರೀಚಾರ್ಜ್ನ ಕ್ಲೈಮ್ ಮಾಡದ ಮೊತ್ತವನ್ನು ರೀಚಾರ್ಜ್ ಮಾಡಿದ ದಿನಾಂಕದಿಂದ 30 ದಿನಗಳ ನಂತರ 2.5% ಸೇವಾ ಶುಲ್ಕದ ಕಡಿತದೊಂದಿಗೆ ಮರುಪಾವತಿಸಲಾಗುತ್ತದೆ.

ಉಳಿಕೆ ಮೌಲ್ಯ

ಪ್ರತಿಯೊಂದು ಪ್ರಯಾಣದ ನಂತರ, ಕಾರ್ಡಿನಲ್ಲಿನ ಸಂಗ್ರಹಿತ ಮೌಲ್ಯದಿಂದ ಕ್ರಮಿಸಿದ ಪ್ರಯಾಣಕ್ಕೆ ನಿಗದಿಪಡಿಸಿದ ಮೊತ್ತದಷ್ಟು ಕಡಿಮೆಯಾಗುತ್ತದೆ. ಉಳಿದ ಮೊತ್ತವು ಕಾರ್ಡಿನಲ್ಲೇ ಉಳಿದಿರುತ್ತದೆ.

ಸಂಗ್ರಹಿತ ಮೌಲ್ಯ ಟಿಕೆಟಿನ ವರ್ಗ ಮೌಲ್ಯ ಸಂಖ್ಯೆ

ಸಂಗ್ರಹಿತ ಮೌಲ್ಯ ಟಿಕೆಟಿನ ಸಂದರ್ಭದಲ್ಲಿ ಟಾಪ್ಅಪ್ ಮೌಲ್ಯವು ಕನಿಷ್ಠ 50.00 ರೂ.ಗಳಾಗಿರತಕ್ಕದ್ದು ಮತ್ತು ನಂತರ ಅದು 50.00 ರೂ.ಗಳ ಗಣಕಗದಲ್ಲಿರತಕ್ಕದ್ದು. ಕಾಂಟ್ಯಾಕ್ಟ್ಲೆಸ್ ಸ್ಮಾರ್ಟ್ಕಾರ್ಡಿನ ವೆಚ್ಚವು 50.00 ರೂ.ಗಳಾಗಿದ್ದು ಅದು ಸಂಗ್ರಹಿತ ಮೌಲ್ಯದಿಂದ ಬೇರೆಯದಾಗಿರುತ್ತದೆ.

ಒಟ್ಟು ಗರಿಷ್ಟ ಸಂಗ್ರಹಿತ ಮೌಲ್ಯ

BMRCL ಮೆಟ್ರೋ ನಿಲ್ದಾಣಗಳಲ್ಲಿ ಟಾಪ್-ಅಪ್ ಮಾಡಿದಾಗ ಸಂಗ್ರಹಿತ ಮೌಲ್ಯ ಟಿಕೇಟಿನಲ್ಲಿನ (ಎಸ್ವಿಟಿ) ಒಟ್ಟು ಗರಿಷ್ಟ ಸಂಗ್ರಹಿತ ಮೌಲ್ಯವು ರೂ 3000 ಗಳಾಗಿರುತ್ತದೆ. ನಿಲ್ದಾಣಗಳ ಹೊರತಾಗಿ, ಮೌಲ್ಯವನ್ನು ಟಾಪ್ಅಪ್ ಮಾಡಿದಾಗ (ಉದಾಹರಣೆಗೆ ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್, ನಿಗಮದ ವೆಬ್ ಸೈಟ್, ಪೆಟಿಎಮ್, ಅಮೇಜಾನ್ ಪೇ .) ಒಟ್ಟು ಗರಿಷ್ಟ ಸಂಗ್ರಹಿತ ಮೌಲ್ಯವು ರೂ 2950.ಗಳಾಗಿರುತ್ತದೆ.

ಸಂಗ್ರಹಿತ ಮೌಲ್ಯ ಟಿಕೆೆಟ್ ಗಳಿಗೆ ಪ್ರಯಾಣ ದರ ರಿಯಾಯಿತಿ

ಸಂಗ್ರಹಿತ ಮೌಲ್ಯ ಟಿಕೆಟ್ ಟೋಕನ್ ದರಗಳ ಮೇಲೆ ಶೇಕಡ 5 ರ ರಿಯಾಯಿತಿಯನ್ನು ಹೊಂದಿದೆ.

ಅವಧಿ ಮೀರಿ ಉಳಿಯುವುದಕ್ಕೆ ಸಂಬಂಧಿಸಿದ ನಿಯಮಗಳು

ಸಿಂಧುವಾದ ಟಿಕೆಟನ್ನು ಹೊಂದಿರುವ ಪ್ರಯಾಣಿಕನು ಅದೇ ನಿಲ್ದಾಣದಿಂದ 20 ನಿಮಿಷಗಳ ಒಳಗಾಗಿ ಮತ್ತು ಇತರ ನಿಲ್ದಾಣಗಳಿಂದ 120 ನಿಮಿಷಗಳ ಒಳಗಾಗಿ ನಿರ್ಗಮಿಸಬಹುದಾಗಿದೆ. ಈ ಮಿತಿಗಳನ್ನು ಮೀರಿ ನಮ್ಮ ಮೆಟ್ರೋದ ಸಂದಾಯಿತ ಪ್ರದೇಶದಲ್ಲಿ ಉಳಿದುಕೊಳ್ಳುವುದಕ್ಕಾಗಿ, ಗರಿಷ್ಟ 100.00 ರೂ.ಗಳಿಗೆ ಒಳಪಟ್ಟು ಪ್ರತಿ ಗಂಟೆಗೆ 50.00 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ.

ಪ್ರಯಾಣಕ್ಕಾಗಿ ಸಂಗ್ರಹಿತ ಮೌಲ್ಯ ಟಿಕೆಟಿನಲ್ಲಿ ಇರಬೇಕಾದ ಕನಿಷ್ಠ ಬಾಕಿ

50.00 ರೂ. ಸಮನಾದ ಸಂಗ್ರಹಿತ ಮೌಲ್ಯವನ್ನು ಸ್ಮಾರ್ಟ್ಕಾರ್ಡ್ ಹೊಂದಿದ್ದರೆ ಗೇಟ್ ಒಳಗೆ ಪ್ರವೇಶಿಸಲು ಪ್ರಯಾಣಿಕನಿಗೆ ಅನುಮತಿಸಲಾಗುತ್ತದೆ. ಒಂದು ವೇಳೆ ಪ್ರಯಾಣಿಕನು ಸ್ಮಾರ್ಟ್ ಕಾರ್ಡ್ ನಲ್ಲಿ ಬಾಕಿ ಇರುವ ಮೌಲ್ಯಕ್ಕಿಂತ ಹೆಚ್ಚಿನ ದೂರವನ್ನು ಪ್ರಯಾಣಿಸಿದ್ದಲ್ಲಿ ನಿರ್ಮಮನ ದ್ವಾರಗಳ ಮೂಲಕ ನಿರ್ಗಮಿಸಲು ಸಾಧ್ಯವಾಗುವಂತೆ ಗ್ರಾಹಕ ಸೇವಾ ಕೇಂದ್ರ (ಕಸ್ಟಮರ್ ಕೇರ್)ದಲ್ಲಿ ಕಾರ್ಡ್ಗೆ ಹಣ ತುಂಬಿಸಿಕೊಳ್ಳಬಹುದಾಗಿದೆ.

ವಿಧಿಸಲಾಗುವ ಕನಿಷ್ಠ ದರ

ವಿಧಿಸಲಾಗುವ ಕನಿಷ್ಠ ದರ: ಸಂಗ್ರಹಿತ ಮೌಲ್ಯ ಟಿಕೆಟನ್ನು ಹೊಂದಿರುವ ಪ್ರಯಾಣಿಕನಿಗೆ ಅದೇ ನಿಲ್ದಾಣದಿಂದ ನಿರ್ಗಮಿಸಲು (ಅಧಿಕ ಅವಧಿಗೆ ಉಳಿದುಕೊಳ್ಳದಿದ್ದರೆ) ಕನಿಷ್ಠ ದರವನ್ನು ವಿಧಿಸಲಾಗುತ್ತದೆ.

ಎಲ್ಲ ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳಲ್ಲಿ ಬೇಪಾವತಿ ಟಿಕೆಟ್

ಸಂಗ್ರಹಿತ ಮೌಲ್ಯ ಟಿಕೆಟ್ ಇದು ಬಿ.ಎಂ.ಆರ್.ಸಿ.ಎಲ್ ಮಾರುವ ಎಲ್ಲ ಕಾಂಟ್ಯಾಕ್ಟ್ಲೆಸ್ ಸ್ಮಾರ್ಟ್ಕಾರ್ಡ್ಗಳಲ್ಲಿ ಲಭ್ಯವಿರುವ ಬೇಪಾವತಿ ಟಿಕೆಟ್ ಆಗಿದೆ.

ಅನ್‌ ರೀಡೆಬಲ್‌ ಕಾರ್ಡ್‌

ಗ್ರಾಹಕ ಸೇವಾ ಕೇಂದ್ರದಲ್ಲಿ ಅನ್‌ ರೀಡೆಬಲ್‌ ಕಾರ್ಡ್‌ಗಳನ್ನು ಜಮಾ ಮಾಡಿದಾಗ, ಅನ್‌ ರೀಡೆಬಲ್‌ ಕಾರ್ಡ್‌ನಲ್ಲಿ ಉಳಿದಿರುವ ಮೊತ್ತವನ್ನು ಹೊಸ ಕಾರ್ಡ್‌ಗೆ ವರ್ಗಾಯಿಸಲಾಗುತ್ತದೆ. ಕಾರ್ಡ್ ಭೌತಿಕವಾಗಿ ಹಾನಿಗೊಳಗಾಗದಿದ್ದರೆ ಮತ್ತು 6 ತಿಂಗಳೊಳಗೆ ಖರೀದಿಸಿದ್ದರೆ ಮಾತ್ರ ಕಾರ್ಡ್‌ನ ವೆಚ್ಚವನ್ನು ಕೊಡಲಾಗುವುದು. ಅನ್‌ ರೀಡೆಬಲ್‌ ಕಾರ್ಡ್‌ನ ಬ್ಯಾಲೆನ್ಸ್ ಅನ್ನು ಹೊಸ ಕಾರ್ಡ್‌ಗೆ ಅನ್‌ ರೀಡೆಬಲ್‌ ಕಾರ್ಡ್‌ ಸಲ್ಲಿಸಿದ 3 ದಿನಗಳ ನಂತರ ಮತ್ತು 60 ದಿನಗಳ ಒಳಗಾಗಿ ವರ್ಗಾವಣೆಯನ್ನು ಮಾಡಲಾಗುತ್ತದೆ.

ಕಳೆದುಹೋದ ಕಾರ್ಡ್

ಕಳೆದುಹೋದ ಕಾರ್ಡ್‌ಗೆ ಮರುಪಾವತಿ ಅಥವಾ ಬ್ಯಾಲೆನ್ಸ್ ವರ್ಗಾವಣೆ ಇಲ್ಲ ಏಕೆಂದರೆ ಇವುಗಳು ವೈಯಕ್ತೀಕರಿಸದ ಕಾರ್ಡ್‌ಗಳಾಗಿವೆ.

QR ಕೋಡ್ ಆಧಾರಿತ ಟಿಕೆಟ್‌

ನಮ್ಮ ಮೆಟ್ರೋ ಅಪ್ಲಿಕೇಶನ್ ಮತ್ತು ವಾಟ್ಸ್ಯಾಪ್ ತ್ವರಿತ ಸಂದೇಶಗಳ ಮೂಲಕ ಬೆಂಗಳೂರು ಮೆಟ್ರೋ ನಿಗಮ QR ಆಧಾರಿತ ಟಿಕೆಟ್‌ ಅನ್ನು ಪ್ರಾರಂಭಿಸಿದೆ. ವಾಟ್ಸ್ಯಾಪ್ ನಲ್ಲಿ ಟಿಕೆಟ್ ವ್ಯವಸ್ಥೆಯನ್ನು ಪರಿಚಯಿಸುವಲ್ಲಿ ಜಾಗತಿಕ ಸಾರಿಗೆ ವ್ಯವಸ್ಥೆಯಲ್ಲಿ BMRCL ಮೊದಲ ಮೆಟ್ರೋ ಆಗಿದೆ.

ಈ ಸೌಲಭ್ಯದೊಂದಿಗೆ, ಪ್ರಯಾಣಿಕರು ತಮ್ಮ ಪ್ರಯಾಣದ ಟಿಕೆಟ್ ಅನ್ನು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಖರೀದಿಸಬಹುದು. ವಾಟ್ಸ್ಯಾಪ್ ನಲ್ಲಿನ ತ್ವರಿತ ಸಂದೇಶ ಸೇವೆಯು ಚಾಟ್‌ಬಾಟ್ (Chatbot) ಸೇವೆಯನ್ನು ಸಹ ಒಳಗೊಂಡಿರುತ್ತದೆ ಮತ್ತು ಪ್ರಯಾಣಿಕರು ವಾಟ್ಸ್ಯಾಪ್ ಸಂಖ್ಯೆ 81055-56677 ಮೂಲಕ ಈ ಚಾಟ್‌ಬಾಟ್ ಅನ್ನು ತಲುಪಬಹುದು. ಈ ಸೌಲಭ್ಯವು ಇಂಗ್ಲಿಷ್ ಮತ್ತು ಕನ್ನಡ ಎರಡೂ ಬಾಷೆಗಳಲ್ಲೂ ಲಭ್ಯವಿದೆ. ವಿವರಕ್ಕಾಗಿ ದಯವಿಟ್ಟು https://youtu.be/kIX15JE_RvM ವೀಕ್ಷಿಸಿ. https://youtu.be/dr66mPsgR3Y

 • ಟಿಕೆಟ್‌ಗಳನ್ನು ಖರೀದಿಸುವುದು :   ಪ್ರಯಾಣಿಕರು ನಮ್ಮ ಮೆಟ್ರೋ ಆಪ್ ಅಥವಾ ವಾಟ್ಸಾಪ್ ಚಾಟ್‌ಬಾಟ್‌ನಲ್ಲಿ ತಮ್ಮ ಅಪೇಕ್ಷಿತ ಪ್ರವೇಶ ಮತ್ತು ನಿರ್ಗಮನ ನಿಲ್ದಾಣವನ್ನು ಆಯ್ಕೆ ಮಾಡಬಹುದು. ನಿಲ್ದಾಣಗಳನ್ನು ಆಯ್ಕೆ ಮಾಡಿದ ನಂತರ, ಪ್ರಯಾಣದ ದರವನ್ನು ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ. ಪ್ರಯಾಣಿಕರು ತಮಗೆ ಬೇಕಾದ ಡಿಜಿಟಲ್ ಮೋಡ್ ಮೂಲಕ ಪಾವತಿ ಮಾಡಬಹುದು. ಯಶಸ್ವಿ ಪಾವತಿಯ ನಂತರ, ಪ್ರಯಾಣಿಕರು ಆಯ್ಕೆ ಮಾಡಿದಂತೆ ನಮ್ಮ ಮೆಟ್ರೋ ಅಪ್ಲಿಕೇಶನ್ ಅಥವಾ ವಾಟ್ಸಾಪ್ ನಲ್ಲಿ QR ಟಿಕೆಟ್ ರಚಿತವಾಗುತ್ತದೆ.

 • ಪ್ರವೇಶ ಮತ್ತು ನಿರ್ಗಮನ ಪಡೆಯುವಿಕೆ :   ರಚಿಸಲಾದ QR ಟಿಕೆಟ್ ಮೂಲಕ ನಿಲ್ದಾಣದ ಪ್ರವೇಶವನ್ನು ಮಾಡಲಾಗುತ್ತದೆ ಮತ್ತು ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ, ಪ್ರಯಾಣಿಕರು ಅದೇ QR ಟಿಕೆಟ್ ಅನ್ನು AFC ಗೇಟ್‌ನಲ್ಲಿ QR ಟಿಕೆಟ್ ಓದಲು ಗೊತ್ತುಪಡಿಸಿದ ಸ್ಲಾಟ್‌ಗೆ ಪ್ರಸ್ತುತಪಡಿಸಿ ನಿರ್ಗಮಿಸಬಹುದು.

 • QR ಟಿಕೆಟ್‌ನ ಮಾನ್ಯತೆ :   ಒಂದು ಸಮಯದಲ್ಲಿ ಒಂದು QR ಟಿಕೆಟ್ ಅನ್ನು ಪಡೆಯಬಹುದು ಮತ್ತು ಇದು ಒಂದು ದಿನಕ್ಕೆ ಮಾನ್ಯವಾಗಿರುತ್ತದೆ. QR ಟಿಕೆಟ್ ಖರೀದಿಸಿದ ನಂತರ ಪ್ರಯಾಣಿಕರು ದಿನದ ಯಾವುದೇ ಸಮಯದಲ್ಲಿ ಪ್ರವೇಶಿಸಬಹುದು.

 • ಮರುಪಾವತಿ :   ಪ್ರಯಾಣಿಕನು ಮರುಪಾವತಿಯನ್ನು ಬಯಸಿದರೆ, ಪ್ರವೇಶಿಸುವ ಮೊದಲು QR ಟಿಕೆಟ್ ಅನ್ನು ರದ್ದುಗೊಳಿಸಬಹುದು. ರದ್ದುಗೊಂಡ QR ಟಿಕೆಟ್‌ಗಾಗಿ, ಹಣವನ್ನು ಏಳು ದಿನಗಳಲ್ಲಿ ಮೂಲ ಖಾತೆಗೆ ಹಿಂತಿರುಗಿಸಲಾಗುತ್ತದೆ. ಪ್ರಯಾಣಿಕರು AFC ಗೇಟ್‌ ಪ್ರವೇಶಿಸಿದ ಸಂದರ್ಭದಲ್ಲಿ, ಯಾವುದೇ ಮರುಪಾವತಿ ಇರುವುದಿಲ್ಲ. QR ಟಿಕೆಟ್ ಅನ್ನು ಒಂದು ದಿನದೊಳಗೆ ರದ್ದುಗೊಳಿಸದಿದ್ದರೆ, ಯಾವುದೇ ಮರುಪಾವತಿಯನ್ನು ನೀಡಲಾಗುವುದಿಲ್ಲ.

ಮೆಟ್ರೋ ʼಕ್ಯು ಆರ್‌ ಕೋಡ್‌ʼ ಟಿಕೆಟ್‌ ಪೇಟಿಎಮ್‌ ಮತ್ತು ಯಾತ್ರಾ ಅಪ್ಲಿಕೇಷನ್ ನಲ್ಲೂ ಕೂಡ ಲಭ್ಯ. ‌

app-img

ಗುಂಪು ಟಿಕೆಟ್:

ಇದು ಗುಂಪು ವ್ಯಕ್ತಿಗಳ ಪ್ರಯಾಣಕ್ಕಾಗಿ ಟಿಕೆೆಟ್ ಕೌಂಟರ್ನಲ್ಲಿ ನೀಡಲಾಗುವ ಕಾಗದದ ಟಿಕೆೆಟ್ ಆಗಿದೆ (ಗುಂಪನ್ನು ಎರಡು ನಿಲ್ದಾಣಗಳ ನಡುವಿನ ಒಂದೇ ಸಂಚಾರಕ್ಕಾಗಿ ಒಟ್ಟಾಗಿ ಪ್ರಯಾಣಿಸಲು ಉದ್ದೇಶಿಸಿರುವ ಕನಿಷ್ಠ 25 ಪ್ರಯಾಣಿಕರುಗಳನ್ನೊಳಗೊಂಡ ವ್ಯಕ್ತಿಗಳ ಒಂದು ತಂಡವೆಂದು ಪರಿಭಾಷಿಸಲಾಗಿದೆ) . ಗುಂಪಿನಲ್ಲಿರುವ ಪ್ರಯಾಣಿಕರಿಗೆ ಅವರನ್ನು ಹಸ್ತಚಾಲಿತ ತಪಾಸಣೆ ಮಾಡಿದ ನಂತರ ‘ತಿರುಗಣೆ ದ್ವಾರ’ದ (ಹಿಂಜ್ಡ್ ಗೇಟ್) ಮುಖಾಂತರ ಸಂದಾಯಿತ ಪ್ರದೇಶ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಗುಂಪು ಟಿಕೆಟ್ ಏಕ ಪ್ರಯಾಣ ಟಿಕೆೆಟ್ ಆಗಿದ್ದು, ಅದನ್ನು ನಿರ್ಗಮನ ನಿಲ್ದಾಣದ ಬಳಿ ಸಂಗ್ರಹಿಸಲಾಗುತ್ತದೆ. ಇದು ಟೋಕನ್ ದರದ ಮೇಲೆ ಶೇಕಡ10 ರಷ್ಟು ರಿಯಾಯಿತಿಯನ್ನು ಹೊಂದಿದೆ. * ಗಮನಿಸಿ: ಗ್ರೂಪ್ ಟಿಕೆೆಟ್ ಗೆ ಯಾವುದೇ ಮರುಪಾವತಿ ಇಲ್ಲ.

ದೊಡ್ಡ ಮತ್ತು ಮಧ್ಯಮ ಗುಂಪು ಪ್ರಯಾಣಿಕರಿಗೆ ರಿಯಾಯಿತಿ ಟಿಕೆಟ್ ಗಳು:


1ನೇ ಜನವರಿ 2023 ರಿಂದ ಮಧ್ಯಮ ಮತ್ತು ದೊಡ್ಡ ಗುಂಪುಗಳಿಗೆ, ಈ ಕೆಳಗಿನಂತೆ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

 • ಮಧ್ಯಮ ಗುಂಪು (ಗುಂಪಿನಲ್ಲಿ 100 ರಿಂದ 1000 ವ್ಯಕ್ತಿಗಳು)

  • ಟೋಕನ್ ದರದ ಮೇಲೆ ಶೇ 20ರಷ್ಟು ರಿಯಾಯಿತಿ. ಪ್ರಯಾಣಿಕರು ಒಟ್ಟಾಗಿ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ ಒಂದೇ ಗಮ್ಯಸ್ಥಾನ ನಿಲ್ದಾಣದಿಂದ ಎಲ್ಲರೂ ಒಟ್ಟಾಗಿ ನಿರ್ಗಮಿಸಬೇಕು.

  • ಪ್ರಯಾಣಿಕರಿಗೆ ಫ್ಲಾಟ್ ದರ ರೂ.35/- ನಮೂದಿಸಿದ ವಿವಿಧ ನಿಲ್ದಾಣಗಳಿಂದ ಪ್ರವೇಶಿಸಬಹುದು ಮತ್ತು ಒಂದೇ ನಿಲ್ದಾಣದಲ್ಲಿ ನಿರ್ಗಮಿಸಬೇಕು ಅಥವಾ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ ನಮೂದಿಸಿದ ವಿವಿಧ ನಿಲ್ದಾಣಗಳಲ್ಲಿ ನಿರ್ಗಮಿಸಬಹುದು.

 • ದೊಡ್ಡ ಗುಂಪು (ಗುಂಪಿನಲ್ಲಿ 1000 ಕ್ಕಿಂತ ಹೆಚ್ಚು ವ್ಯಕ್ತಿಗಳು):

  • ಟೋಕನ್ ದರದ ಮೇಲೆ ಶೇ 20ರಷ್ಟು ರಿಯಾಯಿತಿ. ಪ್ರಯಾಣಿಕರು ಒಟ್ಟಾಗಿ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ ಒಂದೇ ಗಮ್ಯಸ್ಥಾನ ನಿಲ್ದಾಣದಿಂದ ಎಲ್ಲರೂ ಒಟ್ಟಾಗಿ ನಿರ್ಗಮಿಸಬೇಕು.

  • ಪ್ರಯಾಣಿಕರಿಗೆ ಫ್ಲಾಟ್ ದರ ರೂ.30/- ನಮೂದಿಸಿದ ವಿವಿಧ ನಿಲ್ದಾಣಗಳಿಂದ ಪ್ರವೇಶಿಸಬಹುದು ಮತ್ತು ಒಂದೇ ನಿಲ್ದಾಣದಲ್ಲಿ ನಿರ್ಗಮಿಸಬೇಕು ಅಥವಾ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ ನಮೂದಿಸಿದ ವಿವಿಧ ನಿಲ್ದಾಣಗಳಲ್ಲಿ ನಿರ್ಗಮಿಸಬಹುದು.

ಮಧ್ಯಮ ಮತ್ತು ದೊಡ್ಡ ಗುಂಪಿನಲ್ಲಿ ಪ್ರಯಾಣಿಸಲು ಪ್ರಯಾಣದ ದಿನಾಂಕ, ಸಮಯ, ಪ್ರಯಾಣಿಕರ ಸಂಖ್ಯೆ, ಪ್ರವೇಶ ನಿಲ್ದಾಣ, ನಿರ್ಗಮನ ನಿಲ್ದಾಣ ಮತ್ತು ಪ್ರಯಾಣದ ಉದ್ದೇಶವನ್ನು ಸೂಚಿಸಿ ಪ್ರಯಾಣದ ದಿನಾಂಕದಿಂದ ಕನಿಷ್ಟ 7 ದಿನಗಳ ಮುಂಚಿತವಾಗಿ ನಿಗಮಕ್ಕೆ ಬರಹದ ಮೂಲಕ ವಿನಂತಿ ಸಲ್ಲಿಸಬೇಕು. ನಿಗಮವು ಪ್ರಯಾಣದ ವಿವರಗಳನ್ನು ಸೂಚಿಸುವ ಅಧಿಕಾರ ಪತ್ರ ಅಥವಾ ಗುಂಪು ಟಿಕೆಟ್ ಗಳನ್ನು ನೀಡುತ್ತದೆ. ನಿಗಮದ ಅಧಿಕೃತ ಅಧಿಕಾರಿ ಮೂಲಕ ಅಂತಹ ಪ್ರಯಾಣಿಕರ ಗುಂಪನ್ನು ಎಣಿಸುವ ಮತ್ತು ಹಸ್ತಚಾಲಿತ ವಿಧಾನಗಳ ಮೂಲಕ ನಿಲ್ದಾಣಗಳನ್ನು ಪ್ರವೇಶಿಸಲು ಮತ್ತು ನಿರ್ಗಮಿಸಲು ಅನುಮತಿಸಲಾಗುತ್ತದೆ.

ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...