ನವೀನ ಹಣಕಾಸು ಮಾದರಿ

ನವೀನ ಹಣಕಾಸು ಮಾದರಿ

ಬಿಎಂಆರ್‌ಸಿಎಲ್ ಮೆಟ್ರೋ ಯೋಜನೆಗಾಗಿ ನವೀನ ಹಣಕಾಸು ತಂತ್ರಗಳ ಮೂಲಕ ಆದಾಯವನ್ನು ಕ್ರೋಢೀಕರಿಸುತ್ತಿದೆ. ನಾನ್ ಫೇರ್ ಬಾಕ್ಸ್ ಆದಾಯವನ್ನು ಹೆಚ್ಚಿಸಲು ಮೌಲ್ಯವರ್ಧಿತ ಮಾರ್ಗಗಳನ್ನು ಗುರುತಿಸಲು ಬಿಎಂಆರ್‌ಸಿಎಲ್ ನವೀನ ಹಣಕಾಸು ಸಾಧನವನ್ನು ಬಳಸುತ್ತಿದೆ. ಇದು ಬಿಎಂಆರ್‌ಸಿಎಲ್ ಹೆಚ್ಚಿನ ಸಾಲದ ನಿಧಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಖಾಸಗಿ ಸಂಸ್ಥೆಗಳ / ಕಾರ್ಪೊರೇಟ್‌ಗಳ ಭಾಗವಹಿಸುವಿಕೆಯೊಂದಿಗೆ ಸಾರ್ವಜನಿಕರಿಗೆ ಮೀಸಲಾದ ಮೆಟ್ರೋ ಯೋಜನೆಗೆ ಧನಸಹಾಯ ಮಾಡುವ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಬಿಎಂಆರ್‌ಸಿಎಲ್ ನವೀನ ಹಣಕಾಸು ಯೋಜನೆಯ ಭಾಗವಾಗಿ ಸಂಸ್ಥೆಗಳಿಗೆ / ಕಾರ್ಪೊರೇಟ್‌ಗಳಿಗೆ ಹಲವು ಸೌಲಭ್ಯವನ್ನು ನೀಡುತ್ತಿದೆ. ಉದಾಹರಣೆಗೆ ನಿಲ್ದಾಣದ ಹೆಸರಿನ ಹಕ್ಕುಗಳು, ಜಾಹೀರಾತು ಸ್ಥಳ, ವಾಣಿಜ್ಯ ಸ್ಥಳ ಮತ್ತು ನಿಲ್ದಾಣದಿಂದ ಹಣಕಾಸು ಒದಗಿಸಿದ ಸಂಸ್ಥೆಗಳ ಆವರಣಕ್ಕೆ, ಮೀಸಲಾದ ಮೇಲ್ಸೇತುವೆ ಮಾರ್ಗದ ಮೂಲಕ ನೇರ ಪ್ರವೇಶವನ್ನು ಒದಗಿಸುವುದು. ಇವುಗಳಲ್ಲದೆ ಉತ್ತಮ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುವ ಅನುಕೂಲಗಳನ್ನು ಸೃಷ್ಟಿಸುವುದು ಬಿಎಂಆರ್‌ಸಿಎಲ್‌ನ ಧ್ಯೇಯವಾಗಿದೆ. ಅವುಗಳಲ್ಲಿ ಮುಖ್ಯವಾಗಿ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಮಾಲಿನ್ಯ ಹಾಗೂ ಸಂಬಂಧಿತ ಆರೋಗ್ಯ ವೆಚ್ಚಗಳನ್ನು ಕಡಿಮೆ ಮಾಡುವುದು, ಉದ್ಯೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವ ಅಂಶಗಳು ಸೇರಿಕೊಂಡಿವೆ. ಮೆಟ್ರೋ ಕಾರಿಡಾರ್‌ನ ಯಾವುದೇ ಕಾರ್ಪೊರೇಟ್‌ಗಳು ಈ ವಿನೂತನ ಮಾದರಿಯಲ್ಲಿ ಭಾಗವಹಿಸಲು ಆಸಕ್ತಿಯನ್ನು ವ್ಯಕ್ತಪಡಿಸಬಹುದು.

Email: pd@bmrc.co.in

Phone: 080 – 22969280 / 22969274

retail
ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...